ಮಹಮ್ಮದ್ ಕಾಸಿಂ. ಕೆ
ನಿಕ್ಷೇಪ 2014-15 ನಲ್ಲಿ ಸಮಾಧಾನಕರ ಬಹುಮಾನ ಪಡೆದ ಲೇಖನ #2#
ಹಿಂದೊಂದು ಕಾಲವಿತ್ತು. ಸುಮಾರು 10 ವರ್ಷಗಳ ಹಿಂದೆ ತನ್ನ ಪುಟ್ಟ ಮಗುವಿಗೆ ಚಂದಾ ಮಾಮನನ್ನು ತೋರಿಸಿ ಊಟ ಉಣಿಸುತಿದ್ದ ಕಾಲ. ಮಕ್ಕಳೆಲ್ಲಾ ಅಜ್ಜನ ಮೀಸೆಯನ್ನು ಊದಿ ಮೇಲೆ ಮೇಲಕ್ಕೆ ಏರಿಸುತಿದ್ದರು. ಮದುವೆಗೆ ಗಂಡು ಅಥವ ಹೆಣ್ಣು ಹುಡುಕುತಿದ್ದರೆ ಅವರ ಅಕ್ಕ ಪಕ್ಕದಲ್ಲಿರುವವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಅವರ ಗುಣಗಳ ಬಗ್ಗೆ ವಿಚಾರಿಸುತ್ತಿದ್ದರು. ದುಬಾಯಿಯಲ್ಲಿರುವ ಮಗ ತನ್ನ ತಂದೆಗೆ ಪ್ರೀತಿಯಿಂದ ಪತ್ರ ಬರೆಯುತಿದ್ದರೂ, ತಂದೆ ತನ್ನ ಮಗನ ಫೊನ್ ಗಾಗಿ ಕಾಯುತಿದ್ದರು. ಬೆಳಗೆದ್ದು ಹಲ್ಲುಜ್ಜಿ ಮುಖ ತೊಳೆದು ಕನ್ನಡಿ ಮುಂದೆ ತನ್ನ ಮುಖಕ್ಕೆ ಫೊಸ್ ಕೊಡದಿದ್ದರೆ ಅಂದು ಬೆಳಗಾದಂತೆಯೆ ಅನ್ನಿಸುತ್ತಿರಲಿಲ್ಲ. ಕಿತ್ತೊಗಿರೊ ರೇಡಿಯೊವನ್ನು ಮೇಲೆ ಹಿಡಿದು ಅದರ ಆಂಟೆನವನ್ನು ಕಿಟಕಿಯ ಪಕ್ಕ ಹಿಡಿದು ಆಕಾಶವಾಣಿ ಕೇಳದಿದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತಿರಲಿಲ್ಲ. ವಾರಕ್ಕೊಂದು ಸಾರಿಯಾದರೂ ಅತ್ತ ಅತ್ತೆ ಮನೆಗಾದರೂ, ಇತ್ತ ಮಾವನ ಮನೆಗೊಮ್ಮೆ ಹೋಗುಯತ್ತಿದ್ದ. ಇದೆಲ್ಲವೂ ಈ ಆಧುನಿಕ ಯುಗದಲ್ಲಿ ಬರೀ ನೆನಪುಗಳಾಗಿ ಕಂಡ ಯಾವುದೋ ಕನಸಿನಂತೆ ಮಾಯವಾಗುತ್ತಿವೆ. ಈ ಆಧುನಿಕತೆಯ ಮಂದೆ ಚಂದಾ ಮಾಮನಿಗೆ ಬೆಲೆಯೇ ಇಲ್ಲದಾಗಿದೆ. ಮಗುವಿಗೆ ಸಾಂಗು ಹಾಕಿದರೇನೆ ಊಟ. ಅದಕ್ಕೂ ತಿಳಿದಿದೆ ಯಾವುದೂ ಟೇಪು ಯಾವುದು ಲೊಕಲ್ ಎಂದು.ಅಜ್ಜನ ಮೀಸೆಯು ಬರೀ ಅಜ್ಜನ ಕಾಲಕ್ಕೆ ಸೀಮಿತವಾಗಿದೆ. ಎಲ್ಲೊ ಕಂಡ ಹುಡುಗಿ ಜೊತೆ ಚಾಟ್ ಆಗಿ, ಫ್ರೆಂಡ್ ಆಗಿ, ಕೊನೆ ಲವ್ವು ಆಗಿ ಲವ್ವು ಮ್ಯಾರೇಜ್ ನಡೆಯುತ್ತಿರುವ ಈ ಕಾಲದಲ್ಲಿ ಹೆಣ್ಣು ಹುಡುಕುವುದು ವ್ಯರ್ಥವಲ್ಲವೇ...? ಹಿಂದೆ ಕನ್ನಡಿ ಮುಂದೆ ತನ್ನ ಮುಖವನ್ನು ನೋಡುತ್ತಿದ್ದರೆ, ಇಂದು ಮುಖ ಪುಸ್ತಕ (Facebook) ತೆರೆದು ತನ್ನ ಮುಖದ ಅಂದವನ್ನು ಅಳೆಯುತ್ತಾರೆ. ಹತ್ತು ವರ್ಷದ ಹಿಂದಿನ ದನಕ್ಕೂ, ಇಂದಿನ ದನಕ್ಕೂ ಯಾವುದೆ ವ್ಯತ್ಯಾಸವಿಲ್ಲ. ಆದರೆ ಹಿಂದಿನ ಜನಕ್ಕೂ, ಇಂದಿನ ಜನಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ಅದಕ್ಕೆ ಪ್ರಮುಖ ಕಾರಣವು ಆಧುನಿಕವಾಗಿತ್ತಿರುವ ಪ್ರಪಂಚ ಮತ್ತು ಆಧುನಿಕವಾಗುತ್ತಿರುವ ಮಾನವ.
ಇದು ಸ್ಮಾರ್ಟ್ ಫೊನ್ ಯುಗ. ಎಲ್ಲಿ ನೊಡಿದರೂ ಸ್ಮಾರ್ಟ್ ಫೊನ್ ಗಳೇ ಎದ್ದು ಕಾಣುತ್ತವೆ. ಇಂದಿನ ಮಾನವನ ಎಲ್ಲದಕ್ಕೂ ಸ್ಮಾರ್ಟ್ ಫೊನ್ ಬೇಕೇ ಬೇಕು. ಅವನ ಉಡುಗೆ ತೊಡುಗೆಗಳ ಹಾಗೆ ಸ್ಮಾರ್ಟ್ ಫೊನ್ ಕೂಡ ಅನಿವಾರ್ಯವಾಗಿದೆ. ಇಂದಿನ ಅಂತರ್ಜಾಲದ ಬಳಕೆಯೂ ಸ್ಮಾರ್ಟ್ ಫೊನ್ ನಿಂದಲೇ ಆಗುತ್ತಿದೆ. ಹದಿ ಹರೆಯದವನಿಂದ ಹಿಡಿದು ಮುದುಕರವರೆಗೂ ಸ್ಮಾರ್ಟ್ ಫೊನ್ ಬಳಕೆಯಾಗುತ್ತಿದೆ. ಯುವಕರು ಅದೆಷ್ಟು ಸ್ಮಾರ್ಟ್ ಆದರೂ ಕೂಡಾ ಸ್ಮಾರ್ಟ್ ಫೊನ್ ಒಂದು ಇರಲೇ ಬೇಕು.ಅದು ಲೆಟೆಸ್ಟ್ ಆಗಿದ್ದರೆ ಅದೇ ಈ ಪೀಳಿಗೆಯ ಫ್ಯಾಷನ್. ಹೊಸ ಹೊಸ ಅಪ್ಪ್ಲಿಕೇಷನ್ ಗಳು ಅವನ ಆಸಕ್ತಿಯನ್ನು ದಿನೆ ದಿನೆ ಹೆಚ್ಚಿಸುತ್ತಲೇ ಇರುತ್ತವೆ. ಹೊಟ್ಟೆಗೆ ಹಸಿದಿದ್ದರೂ ನೆಟ್ ಕಾರ್ಡ್ ಗಳು ಅವನ ಹಸಿವನ್ನು ನೀಗಿಸುತ್ತವೆ. ಊಟ ಮಾಡಿಲ್ಲದಿದ್ದರೂ ಫ್ಲಿಪ್ ಕವರ್ ಹೊಸದೆ ಇರಬೇಕು. ದಿನ ಕಳೆದಂತೆ ಸ್ಮಾರ್ಟ್ ಫೊನ್ ಬಳಕೆ ಹೆಚ್ಛುತ್ತಲೇ ಇದೆ. ಪ್ರತಿಗಳಿಗೆ ಸ್ಮಾರ್ಟ್ ಫೊನ್ ತನ್ನ ಕೈಯಲ್ಲಿರ ಬೇಕೆನ್ನುವ ಮಟ್ಟಿಗೆ ಇಂದಿನ ಮಾನವ ಮಾರು ಹೋಗಿದ್ದಾನೆ ಎನ್ನುವುದೇ ವಿಶಾದನೀಯ.
ಸಾಮಾಜಿಕ ತಾಣದಲ್ಲಿ ಸಿಂಹಪಾಲು ಯುವಕರದ್ದೇ ಸದ್ದು. ಭಾರತ ರಾಷ್ಟ್ರವನ್ನು ಒಂದು ಯುವ ರಾಷ್ಟ್ರ ಎಂದು ಕರೆಯುತ್ತಾರೆ. ಏಕೆಂದರೆ ಭಾರತದಲ್ಲಿ ಶೇ 60 ಕ್ಕಿಂತಲೂ ಹೆಚ್ಚು ಯುವಕರಿದ್ದಾರೆ. ಪ್ರತಿಯೊಬ್ಬನ ಜೀವನದ ಪ್ರಮುಖ ಘಟ್ಟವಾಗಿದೆ ಯೌವ್ವನ. ಕುದಿಯುತ್ತಿರುವ ರಕ್ತ, ದಷ್ಟ ಪುಷ್ಟವಾದ ಶರೀರ, ಶರೀರವನ್ನೆ ನಿಯಂತ್ರಿಸಲಾಗದ ಸಮಯ, ಕೆಟ್ಟ ಚಟಗಳು ಮೊಳಕೆಯೊಡೆಯುವ ಸುಸಂಧರ್ಭ. ಇಂತಹ ಯುವತ್ವವನ್ನು ಬರೀ ಮೋಜಿಗಾಗಿ ವ್ಯಯಿಸದೆ, ಸತ್ಯ, ನೀತಿ, ನಿಯಮ, ಕ್ರಾಂತಿ ಇತ್ಯಾದಿ ಒಳ್ಳೆಯ ಕೆಲಸಗಳಲ್ಲಿ ಸೇರಿ ನಾಳೆಯ ಯುವಕ್ಕೆ ಮಾದರಿಯಾಗ ಬೇಕು. ಆದರೆ ಪ್ರಸ್ತುತ ಯುವಕರು ಕರ್ತವ್ಯಗಳೇನು? ಅವರು ಮಾಡ ಬೇಕಾದ ಕೆಲಸಗಳೆನು? ಆಧುನಿಕ ಶೈಲಿಯನ್ನು ಸಂಪೂರ್ಣವಾಗಿ ತಿರಸ್ಕರಿಸ ಬೇಕೆಂದಲ್ಲ. ನವನಾವಿನ್ಯತೆಯ ಆವಿಷ್ಕಾರವಾಗಿದ್ದ ಆಧುನಿಕತೆಯೂ ಬೇಕು. ಇತ್ತ ಸಂಪ್ರದಾಯಯುತ ಜೀವನ ಶೈಲಿಯೂ ಬೇಕು.
ಸಾಮಾಜಿಕ ತಾಣ ಅಂದ ಕೂಡಲೇ ನೆನಪಿಗೆ ಬರುವುದು ಫೇಸ್ಬುಕ್, ವಾಟ್ಸಪ್, ಗೂಗಲ್, ಟ್ವಿಟರ್, ಜೀ ಮೇಲ್ ಇತ್ಯಾದಿ. ಆದರೆ ಇದೆಲ್ಲಕ್ಕೂ ಮುಂಚಿತವಾಗಿ ಸಮಾಜಿಕ ತಾಣ ಎಂದರೇನು? ಅದರಿಂದ ಇರುವ ಉಪಕಾರಗಳೇನು? ಇದನ್ನು ಉಪಯೋಗಿಸ ಬೇಕಾದ ರೀತಿ ಯಾವುದು ? ಇಂದು ಅದು ದುರುಪಯೋಗವಾಗುತ್ತಿರುವುದು ಹೇಗೆ. ಎನ್ನುವಂತಹ ಪ್ರೆಶ್ನೆಗಳ ಉತ್ತರಗಳು ತಿಳಿದಿರಲೇ ಬೇಕು.

ನಮ್ಮಲ್ಲಿರುವ ಒಂದು ವಿಷಯದ ಕುರಿತು ಚರ್ಚಿಸುವ ಅದಕ್ಕೆ ಪ್ರತಿಕ್ರಿಯಿಸಲು ಅವಕಾಶವಿರುವ ಪ್ರತಿಯೊಂದು ತಾಣವು, ಸಾಮಾಜಿಕ ತಾಣವಾಗಿದೆ. ಸಾಮಾಜಿಕ ತಾಣಗಳ ಕುರಿತು, ಅದರ ಬಳಕೆಯ ರೀತಿಯನ್ನು ಸ್ಪಷ್ಟವಾಗಿ ತಿಳಿದಿರುವ ಒಬ್ಬ ಅದನ್ನು ಸರಿಯಾಗಿ ಉಪಯೋಗಿಸುವಲ್ಲಿ ವಿಫಲನಾಗುತ್ತಾನೆ ಎನ್ನುವುದೇ ಖೇದಕರ. ಇತ್ತ ಕುರ್ಚಿಯಲ್ಲಿ ಕೂತು ವಾಟ್ಸಪ್ ವೀಕ್ಷಿಸುತ್ತಿದ್ದ ನನ್ನಲ್ಲಿ ಆಚೆ ಮನೆಯ ಅಜ್ಜ ನಗುತ್ತಾ ಕೇಳಿದರು "ಏನೋ ಪುಟ್ಟ, ಯಾವಾಗಲೂ ಆ ಮೊಬೈಲನ್ನು ಆ ಕಡೆ ಈ ಕಡೆ ಒತ್ತುತ್ತಾ ಇರುತ್ತಿಯಲ್ಲೋ. ಅಷ್ಟು ಚಿಕ್ಕ ಮೊಬೈಲ್ನಲ್ಲಿ ಹಾಗೆ ನೋಡಲಿಕ್ಕೇನಿದೆ?" ನಾನು ಸ್ವಲ್ಪ ಸುಮ್ಮನಿದ್ದು ಹೇಳಿದೆ" ನೀವು ಯಾವಾಗ ನೋಡಿದರೂ ಎಲೆ ಅಡಿಕೆ ಜಗಿಯುತ್ತಿರುತ್ತೀರಲ್ಲಾ? ಹಾಗೆ ಇಂದಿನ ಈ ಜನರಿಗೆ ಅಂತರ್ಜಾಲ ವ್ಯಸನವಾಗಿ ಬಿಟ್ಟಿದೆ. ಒಂದು ಹೊತ್ತು ಅದು ಇಲ್ಲದಿದ್ದರೆ ಅದು ಬೊರ್ ಎನಿಸುತ್ತದೆ.ದಿನಕ್ಕೊಂದು ಹೊಸತು ಅಪ್ಡೇಟ್ ಮಾಡಿ ಇನ್ನಷ್ಟು ಆಕರ್ಷಣೀಯವಾಗುತ್ತದೆ" ಎನ್ನುತ್ತಾ ನಾನು ಚಾಟಿಂಗ್ ಮುಂದುವರೆಸಿದೆ.
ಸರ್ಚ್ ಎಂಜಿನ್ ಅಂತರ್ಜಾಲದ ಬಳಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮಲ್ಲಿರುವ ಒಂದು ವಿಷಯದ ಕುರಿತು ಶೋಧಿಸಲು, ಮಾಹಿತಿ ಸಂಗ್ರಹಿಸಲು ಸರ್ಚ್ ಎಂಜಿನ್ ಅತ್ಯಾವಶ್ಯಕವಾಗಿದೆ. ಸಮಾಜಿಕ ತಾಣವಾದ ಗೂಗಲ್ ಒಂದು ಅಧ್ಬುತ ಸರ್ಚ್ ಎಂಜಿನ್ ಆಗಿದೆ. ಪ್ರಪಂಚದ ಅತೀ ವಿಷಾಲವಾದ, ಸರಳವಾದ ವಿಶ್ವವ್ಯಾಪಿಯಾಗಿರುವ ಅಮೇರಿಕಾದ ಕಂಪನಿಯಾಗಿದೆ. ಎಲ್ಲಾ ದೇಶಗಳ ವಿಸ್ಮಯಗಳನ್ನು ಶೇಖರಿಸಿ, ಲಭಿಸುವಂತೆ ಮಾಡುವುದೇ ಅದರ ಪ್ರಮುಖ ಕೆಲಸವಾಗಿದೆ. ಅದರ ಎಲ್ಲಾ ವಿಧಾನಗಳಿಂದ 20 ಕೋಟಿಗಳಿಗಿಂತಲೂ ಮಿಕ್ಕ ವಿಷಯಗಳು ಪ್ರತಿದಿನ ಗೂಗಲ್ ಕೈ ಸೇರುತ್ತದೆ. ಸರ್ಚ್ ಎಂಜಿನ್ ಗಾಗಿ ಮಾತ್ರ ಪ್ರಾರಂಭಿಸಿದ ಗೂಗಲ್ ಇಂದು ನ್ಯೂಸ್, ವಿಡಿಯೊ, ಆನ್ ಲೈನ್ ವ್ಯಪಾರಗಳು ಮಾಡುತ್ತದೆ. ಆದರೆ ಕೆಲವರ ಭಾವನೆಯಂತೆ ಅಂತರ್ಜಾಲವೆ ಗೂಗಲ್ ಎನ್ನುವುದು ತಪ್ಪು. ಗೂಗಲ್ ಅಂತರ್ಜಾಲವಾಗಿದೆಯೆ ವಿನಹ, ಅಂತರ್ಜಾಲವು ಗೂಗಲ್ ಅಲ್ಲ. ಭಾರತದಲ್ಲಿ ಕರ್ನಾಟಕವೆಂಬಂತೆ, ಗೂಗಲ್ ಅಂತರ್ಜಾಲದ ಚಿಕ್ಕ ಭಾಗವಾಗಿದೆ.ನಮಗೆ ಜಾಲಾಡಲು ಹಲವು ಸರ್ಚ್ ಎಂಜಿನ್ಗಳಿವೆ. ಅದರಲ್ಲಿ ಗೂಗಲ್ ಎತ್ತಿದ ಕೈ. ಎಲ್ಲಾ ಸರ್ಚ್ ಎಂಜಿನ್ ಗಳು ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಗೂಗಲ್, ಯಹೂ, ಬಿಂಗ್ ಇವೆಲ್ಲವೂ ಡಾಟಾ ಹುಡುಕುವ ವಿಧಾನವು ಬೇರೆ ಬೇರೆಯಾಗಿದೆ. ಕೆಲವೊಮ್ಮೆ ಒಂದೇ ವಿಷಯವನ್ನು ಈ ಮೂರೂ ಸರ್ಚ್ ಎಂಜಿನ್ಗಳಲ್ಲಿ ಹುಡುಕಿದರೂ ಶೋಧಿಸಿದರೆ ಮೊದಲ ಪುಟದಲ್ಲಿ ಬೇರೆ ಬೇರೆ ಫಲಿತಾಂಶ ಸಿಗುವ ಸಾಧ್ಯತೆವಿದೆ.
www.dogpile.com, www.zapmeta.com, www.search.com ಮೊದಲಾದ ಸರ್ಚ್ ಎಂಜಿನ್ ಗಳಲ್ಲಿ ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಮಾಹಿತಿಗಳನ್ನು ನೀಡುತ್ತದೆ. ಸಮಾಜಿಕ ತಾಣವಾದ ಫೇಸ್ಬುಕ್, ಟ್ವಿಟರ್, ಯಹೂ, ಬ್ಲಾಗ್ ಮುಂತಾದುವುಗಳಿಲ್ಲಿರುವ ಮಾಹಿತಿಯನ್ನುwww.icerocket.com ಎಂಬ ತಾಣದಲ್ಲಿ ಜಾಲಾಡ ಬಹುದು. ಸ್ವಭಾಷೆಯಲ್ಲಿರುವ ಮಾಹಿತಿಗಳನ್ನು ಪಡೆಯಲು ಕೆಲವೊಮ್ಮೆ ಗೊಂದಲಗಳಿರುತ್ತವೆ. ಅದಕ್ಕಾಗಿ www.ask.com ನಿಂದ ಪ್ರೆಶ್ನೆ ರೂಪದಲ್ಲೂ ಕೇಳ ಬಹುದು. ಅಂತರ್ಜಾಲದಲ್ಲಿ ಜಾಲಾಡುವಾಗ ಕೆಲವೊಮ್ಮೆ ನಮ್ಮನ್ನು ಅಶ್ಲೀಲ ತಾಣಗಳಿಗೆ ಕರೆದೊಯ್ಯಬಹುದು. ಅದನ್ನು ತಪ್ಪಿಸಲು www.kidrex.com ಅನ್ನು ಉಪಯೋಗಿಸ ಬಹುದು. ಇದು ಮಕ್ಕಳಿಗೆ ಅತ್ಯಾವಶ್ಯಕವಾದ ವಿಷಯಗಳನ್ನು ಹುಡುಕಿ ತರುತ್ತದೆ. ವೈದಕೀಯಶೋಧಗಳಿಗಾಗಿ www.imedisearch.com ಉಪಯೋಗಿಸ ಬಹುದು. ಇಂತಹಾ ಸರ್ಚ್ ಎಂಜಿನ್ಗಳಿಂದ ನಮಗೆ ಬೇಕಾದ ವಿಷಯಗಳನ್ನು ಶೋಧಿಸಿ ಬೇಕಾದ ಪುಟಗಳಿಗೆ ಹೋಗಬಹುದು.ಅವಶ್ಯಕವಾದ ಚಿತ್ರಗಳನ್ನು ನೋಡ ಬಹುದು. ಹೀಗೆ ಎಲ್ಲದಕ್ಕೂ ಅವಕಾಶವಿರುತ್ತದೆ.

ದಿನದಿಂದ ದಿನಕ್ಕೆ ಹೆಚ್ಚಾಗಿ ಬೆಳೆಯುತ್ತಿರುವ ಆಕರ್ಷಣೀಯ ತಾಣವಾಗಿದೆ ಫೇಸ್ಬುಕ್. ಇದರಲ್ಲಿ 300 ಮಿಲಿಯನ್ ಗಿಂತಲೂ ಹೆಚ್ಚು ಸಕ್ರೀಯ ಬಳಕೆದಾರರಿದ್ದಾರೆ. ಇಂದು ಇದು ಎಲ್ಲರಿಗೂ ಚಿರ ಪರಿಚಯ. ತನ್ನಲ್ಲಿರುವ ಒಂದು ವಿಷಯದ ಕುರಿತು ಚರ್ಚಿಸಲು, ಅವರ ಅಭಿಪ್ರಾಯಗಳನ್ನು ತಿಳಿದು ಅದಕ್ಕೆ ಪ್ರತಿಕ್ರಿಯೀಸಲು ಸಹಾಯಕವಾಗಿದೆ. ನಮ್ಮಲ್ಲಿರುವ ಪ್ರೆಶ್ನೆ, ವಿಷಯ, ವಿಸ್ಮಯ, ಚಿಂತನೆ, ಮನೋರಂಜನೆಗಳನ್ನು ಜನರಿಗೆ ತಿಳಿಯಪಡಿಸಲು. ಆಗು ಹೋಗುಗಳನ್ನು ಮನುಕುಲಕ್ಕೆ ಎಟಕಿಸುವ ಉತ್ತಮ ಮಾಧ್ಯಮವಾಗಿದೆ. ಇಂದಿನ ಮಾಧ್ಯಮಗಳು ಬರೀ ಧರ್ಮ ಸಂಘಟನೆಗಾಗಿ ಸಂಘಟನೆಗೊಂಡ ಪತ್ರಿಕೆಯಂತೆ ಕೋಮು ಪ್ರಚೋದನೆ ಮಾಡುತ್ತಲೂ, ದ್ವನಿಗೆ ಪ್ರತಿದ್ವನಿಯಾಗಿ ಪ್ರತಿಸ್ಪರ್ಧಿಸುವಾಗ ಜಾಹಿರಾತು ಕೀರ್ತಿ ಕಾಮನೆಗಳಿಗಾಗಿ ಹಣದ ಹಿಂದೆ ಸಾಲು ನಿಲ್ಲುತ್ತಿರುವಾಗ ಇಂತಹಾ ಸಾಮಾಜಿಕ ತಾಣಗಳು ಉಪಯುಕ್ತವಾಗಿದೆ. ಇದೇ ರೀತಿ ಟ್ವಿಟರ್ ಕೂಡ ಜನಪ್ರಿಯವಾಗಿದೆ. ಹ್ರಸ್ವ ಸಂದೇಶಗಳಂತಹ ಚಿಕ್ಕ ಮಾತುಗಳಿಂದ ವಿವರಗಳನ್ನು ಜನರಿಗೆ ತಲುಪಿಸಲು ಇನ್ನೊಬ್ಬರು ಅಪ್ಡೇಟ್ ಮಾಡಿದ ಸಂದೇಶಗಳನ್ನು ವೀಕ್ಷಿಸಲೂ ಬಹುದು. ನೀವು ಪ್ರಸ್ತುತ ಮಾಡುತ್ತಿರುವ ಕೆಲಸಗಳನ್ನು 140 ಅಕ್ಷರಗಳನ್ನು ಒಳಗೊಂಡ ಪದಗಳನ್ನು ತಮ್ಮ ಸ್ನೇಹಿತರಿಗೆ ಟ್ವೀಟ್ಸ್ ಮೂಲಕ ತಿಳಿಸಬಹುದು. ಅದೇ ರೀತಿ ಇತ್ತೀಚಿನ ಕಾಲದಲ್ಲಿ ಮಾಯವಾಗುತ್ತಿರುವ ಲಿಂಕ್ಡ್ ಇನ್, ಗೂಗಲ್ ಪ್ಲಸ್, ಯಾಹೂ ಮುಂತಾದುವುಗಳು ಇಂತಹದೇ ಕಾರ್ಯಗಳನ್ನು ಮಾಡುತ್ತಿದೆ. ಅದೇ ರೀತಿ ನಮ್ಮೆಲ್ಲರ ಆಪ್ತ ಮಿತ್ರ ಫೇಸ್ಬುಕ್ ಕೂಡಾ ಒಂದು ದಿನ ಮರೆಯಾಗಲಿಕ್ಕಿದೆ. ದಿನದಿಂದ ದಿನಕ್ಕೆ ಆಧುನಿಕ ಆವಿಶ್ಕಾರವಾಗುತ್ತಿರುವಾಗ ಹೊಸತೊಂದು ತಾಣಕ್ಕೆ ಜಿಗಿಯಲಿದ್ದಾರೆ. ಇದು ಪ್ರಕ್ರತಿ ನಿಯಮ. ಪತ್ರ ಬರೆಯುತ್ತಿದ್ದ ಕೈಗಳು ಇಂದು ಟೈಪ್ ಮಾಡುತ್ತಿವೆ. ಇಂದು ನಮ್ಮ ಜೀವನದ ಒಂದು ಭಾಗವಾಗಿರುವ ಫೇಸ್ಬುಕ್ ಗಿಂತಲೂ ಮುಂಚೆ ಒಂದು ಕಾಲವಿತ್ತು. ಆರ್ಕುಟ್ ಎನ್ನುವ ಜನಪ್ರೀಯ ತಾಣ. ಅದರಲ್ಲೂ ಇದೇ ರೀತಿ ಪ್ರತಿದಿನ ಸಂದೇಶ ಕಳುಹಿಸುತಿದ್ದರು. ಆದರೆ ಫೇಸ್ಬುಕ್ ಬಂದ ಕೂಡಲೇ ಆರ್ಕುಟ್ ಕಣ್ಮರೆಯಾಯಿತು. ಮತ್ತೊಂದು ಜನಪ್ರಿಯ ತಾಣವೆಂದರೆ "ಯೂಟ್ಯೂಬ್". ಅದರಲ್ಲಿ ಜನರಿಗೆ ಬೇಕಾದಂತಹ ವಿಡಿಯೋಗಳನ್ನು ವೀಕ್ಷಿಸ ಬಹುದು. ಅಪ್ಲೋಡ್ ಮಾಡ ಬಹುದು. ಲೈಕ್ ಕಾಮೆಂಟ್ಸ್ ಮಾಡುತ್ತಲೂ ಸಬ್ ಸ್ಕ್ರೈಬ್ ಮಾಡ ಬಹುದಾಗಿದೆ. ಆದರೇ ವಾಟ್ಸಪ್ ಫೇಸ್ಬುಕ್ ಗಳಂತಹಾ ತಾಣಗಳು ಬಂದ ನಂತರ ಅದರ ವ್ಯಾಲ್ಯು ಕಡಿಮೆಯಾಗುತ್ತಲಿದೆ. ಅದೇ ರೀತಿ ವಿಡಿಯೊಗಳನ್ನು ಡೌನ್ ಲೋಡ್ ಮಾಡಲು ವಿಯು ಕ್ಲಿಪ್, ಟುಬಿಡಿ ಮುಂತಾದುವುಗಳನ್ನು ಬಳಸುವವರೂ ಇದ್ದಾರೆ.
ಇನ್ನೂ ತ್ವರಿತ ಸಂದೇಶಗಳನ್ನು ಕಳಿಸಬಲ್ಲ ಅಪ್ಲಿಕೇಶನ್ಗಳು ಆಕರ್ಷಣೀಯವಾಗಿದೆ. ವಾಟ್ಸಪ್ ...ಅದೊಂದು ಜನಪ್ರೀಯ ತಾಣ. ಇದರ ಹೆಸರು ಕೇಳದವರು ಯಾರೂ ಇಲ್ಲ.ಇದರಲ್ಲಿ 500 ಮಿಲಿಯನ್ ಗಿಂತಲೂ ಅಧಿಕ ಬಳಕೆದಾರರಿದ್ದಾರೆ. ಇದರಲ್ಲಿ 400 ಮಿಲಿಯನ್ ಭಾರತೀಯರಿದ್ದಾರೆ. ಇದು ಸಂದೇಶಗಳನ್ನು ಬರೆಯಲು, ಕಳುಹಿಸಲು ಸರಳ ಮತ್ತು ಸುಲಭವಾಗಿದ್ದರಿಂದ ಹೆಚ್ಚು ಜನ ಮುಗಿ ಬೀಳುತ್ತಾರೆ. ಇದನ್ನು ಬಳಸಲು ಹೆಚ್ಚು ಜ್ನಾನದ ಅವಶ್ಯಕತೆ ಇಲ್ಲದಿದ್ದರಿಂದ ಫೇಸ್ಬುಕ್ ಬಳಸದವರೂ ಕೂಡ ವಾಟ್ಸಪ್ ಬಳಸುತ್ತಾರೆ. ಹೆಚ್ಚು ಜನಪ್ರಿಯವಾಗದ ಭಾರತೀಯವಾದ "ಹೈಕ್" "ಇನ್ಸಾಂಟ್" ಇದೇ ರೀತಿ ಕರೆಗಳೂ, ವಿಡಿಯೋ ಕರೆಗಳನ್ನು ಮಾಡಬಲ್ಲ "ಸ್ಕೈಪ್" "ವಿಚಾಟ್" "ಲೈನ್" "ಇಮೊ" "ನಿಂಬಝ್" ಮುಂತಾದುವುಗಳು ಇಂತಹದೇ ಕಾರ್ಯಗಳನ್ನು ಮಾಡುತ್ತಲಿವೆ.
ಇದೇ ಸಮಾಜಿಕ ತಾಣಗಳ ನೈಜ ಮುಖಗಳು. ಇದಕ್ಕೆ ಮಸಿ ಬಳಿಯುತ್ತಿರುವವರೂ ನಾವೇ. ಪೌಡರ್ ಹಚ್ಚ ಬೇಕಾದವರೂ ನಾವೇ. ಅದೊಂದು ಚಕ್ರವಿದ್ದಂತೆ. ನಾವು ಕಳುಹಿಸಿದ ಸಂದೇಶಗಳು ಕೆಲವೊಮ್ಮೆ ಫಾರ್ವರ್ಡ್ ಮುಖಾಂತರ, ಶೇರ್ ಮೂಲಕ ನಮಗೇ ರಿಪೀಟ್ ಹೊಡೆಯಬಹುದು. ಇದರಲ್ಲಿ ಮುಳ್ಳಿನ ಹಾದಿಗಳೇ ಹೆಚ್ಚು. ಸಂಚರಿಸುವಾಗ ತುಂಬಾ ಜಾಗರೂಕರಾಗಿರಬೆಕು. ಗಲ್ಲಕ್ಕೆ ಕೈ ಇಟ್ಟು ಚಿಂತಿಸ ಬೇಕಾದ ವಾರ್ತೆಗಳು ಸಾಧಾರಣವೆಂಬಂತೆ ಒಳ ಪುಟದ ಮೂಲೆ ಸೇರಿರುತ್ತದೆ. ದಿನ ನಿತ್ಯ ಒಂದಲ್ಲಾ ಒಂದು ವಾರ್ತೆ ಇದ್ದೇ ಇರುತ್ತದೆ. ಮೊನ್ನೆ ತಾನೆ ಪೇಪರಲ್ಲಿ ಬಂದ ವಾರ್ತೆ ನೋಡಿ ನನ್ನ ಮೈ ಜುಮ್ ಎಂದಿತು. ವೆಲ್ಡಿಂಗ್ ಮಾಡುತಿದ್ದ ಜೆರ್ರಿ ಫ್ರಾನ್ಸಿಸ್ ಎಂಬ 18 ವಯಸ್ಸಿನ ಕೇರಳದ ಬಾಲಕ ಮಂಗಳೂರಿನ 15 ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಚಾಟಿಂಗ್ ಮೂಲಕ ಪ್ರೀತಿಸಿ, ಮೋಸ ಮಾಡಿ ಕಿಡ್ನ್ಯಾಪ್ ಮಾಡಿದ್ದ. ಫೇಸ್ಬುಕ್ ನಲ್ಲಿ ಪರಿಚಯವಾದ ಹುಡುಗ ಮದುವೆಯಾಗುವುದಾಗಿ ನಂಬಿಸಿ ಹುಡುಗಿಯ ಮಾನವನ್ನೂ ದೋಚಿದ. ಚಿನ್ನವನ್ನೂ ದೋಚಿದ. ಇಂತಹ ವಾರ್ತೆಗಳು ಮಾಮೂಲಾಗಿ ಬಿಟ್ಟಿದೆ. ಫೇಸ್ಬುಕ್ ... ಇದರಲ್ಲಿ ಮುಖ ಪರಿಚಯವೂ ಇಲ್ಲದ ಯಾರ್ಯಾರೋ ಜೊತೆ ಸಂಪರ್ಕ ಮಾಡುವುದರಿಂದ ಸ್ವತಹಾ ಅಪಾಯವನ್ನು ಆಹ್ವಾನಿಸುತ್ತಾರೆ. ಶಾಲಾ ಕಾಲೇಜು ಕಲಿಯುವ ಹೆಣ್ಣು ಮಕ್ಕಳು ಸ್ವತಹ ಮೊಬೈಲ್ ಇಲ್ಲದಿದ್ದರೆ ಮನೆಯಲ್ಲಿ ಇನ್ಟರ್ನೆಟ್ ಸೌಲಭ್ಯವಿಲ್ಲದಿದ್ದರೆ, ಸೈಬರ್ ಕೆಫೆಗಳಲ್ಲಿ ಯಾರ್ಯಾರೊಂದಿಗೆ ಚಾಟಿಂಗ್ ಮಾಡಿ ಸಮಯ್ ದುರುಪಯೋಗ ಪಡಿಸಿ ಕೊಳ್ಳುತ್ತಾಳೆ. ಯಾರಾದರೂ ಕೇಳಿದರೆ ಸ್ಪೆಶಲ್ ಕ್ಲಾಸ್ ಎಂಬ ನೆಪ ಕಟ್ಟುತ್ತಾಳೆ.
ನನಗೆ ಅಂತರ್ಜಾಲವೆಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲಿ ಸಾಮಾಜಿಕ ತಾಣವೆಂದರೆ ಅಚ್ಚು ಮೆಚ್ಚು. ಮೊದಲು "ಆರ್ಕುಟ್" ನಲ್ಲಿ ಸ್ಕ್ರಾಪ್ ಬುಕ್ ವೀಕ್ಷಿಸುವುದರಲ್ಲೂ ನನ್ನ ಕೈವಾಡವಿತ್ತು. ಕ್ರಮೇಣ ಫೇಸ್ಬುಕ್ ನಲ್ಲೂ ಯಾರದೋ ಸಹಾಯದಿಂದ ಹೊಸತೊಂದು ಪ್ರೊಫೈಲನ್ನು ಪ್ರಾರಂಭಿಸಿದೆ. ಅವತ್ತು ನನ್ನಲಿದ್ದದ್ದು ಫ್ಯಾಮಿಲಿ ಫ್ರೆಂಡ್ ಕೊಟ್ಟ ಮೆಮೊರಿ ಕೂಡ ವರ್ಕ್ ಆಗದ ಕ್ಲಾಸಿಕ್ ಕ್ಯಾಮೆರ ಸೆಟ್ ಕ್ಲ್ಯಾರಿಟಿ ಕೂಡ ಇಲ್ಲದ ಫೊಟೊಗಳು ಡಿಲೀಟ್ ಮಾಡಲು ಮನಸ್ಸು ಬಾರದೆ ಇಂದೂ ಕೂಡ ನನ್ನ ಪ್ರೊಫೈಲ್ನಲ್ಲಿದೆ. ಅವತ್ತು ಆದಿತ್ಯವಾರವಾಗಿರಬೇಕು ಅಥವಾ ಯಾವುದೋ ರಜಾದಿನವಾಗಿರ ಬೇಕು. ಫ್ರೀ ಟೈಮಲ್ಲಿ ಫ್ರೆಂಡ್ಸ್ ಜೊತೆ ಸುತ್ತುವುದು, ಆಟವಾಡಲು ಗ್ರೌಂಡ್ ಗೆ ಹೋಗುವುದೂ ಇವೆಲ್ಲದರಲ್ಲೂ ನನಗೆ ಆಸಕ್ತಿ ಇರಲಿಲ್ಲ. ಅಂತೂ ಒಂದು ನೆಟ್ ಕಾರ್ಡ್ ತಂದು ನೆಟ್ ರಿಚಾರ್ಜ್ ಮಾಡಿ ಫೇಸ್ ಬುಕ್ ತೆರೆದಾಗ ಎರಡು ಮೂರು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದರಲ್ಲೂ ಫಾತಿಮಾಳ ರಿಕ್ವೆಸ್ಟ್ ನನ್ನಲ್ಲಿ ಇನ್ನಷ್ಟೂ ಅಚ್ಚರಿ ಮೂಡಿಸಿತ್ತು. ಎಕ್ಸೆಪ್ಟ್ ಮಾಡಿ ಚಾಟಿಂಗ್ ಆರಂಭಿಸಿದೆ, ಹಾಯಿ ಎನ್ನುವುದಕ್ಕೆ ತಕ್ಷಣವಲ್ಲದಿದ್ದರೂ ಕ್ರಮೇಣ ರಿಪ್ಲೈ ಕೂಡಾ ಬಂದು ಬಿಟ್ಟಿತ್ತು. ಪಂಜರದಿಂದ ತಪ್ಪಿಸಿಕೊಂಡ ಗಿಳಿಯಂತೆ ನನ್ನ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಹೀಗೆ ದಿನಗಳುರುಳಿದವು. ಒಂದು ತಿಂಗಳ ನಂತರ ಅವಳೇ ಹೇಳಿಬಿಟ್ಟಳು ಅವಳು ಅವಳಲ್ಲ. ಅವಳು ಅವನು ನನ್ನ ಫ್ರೆಂಡ್ ಎಂದು. ಅಂದಿನಿಂದ ಯಾವ ಹುಡುಗಿಯರಿಗೂ ಮೆಸೇಜ್ ಮಾಡಲು ಮನಸ್ಸೇ ಇರುತ್ತಿರಲಿಲ್ಲ, ಮಾತ್ರವಲ್ಲ ಸಾಮಾಜಿಕ ತಾಣಗಳ ಮೇಲಿರುವ ವಿಶ್ವಾಸವು ಕಡಿಮೆಯಾಗಿತ್ತು.
ಸರಿಯಾಗಿ ಫೇಸ್‍ಬುಕ್ ಬಳಸಲು ತಿಳಿಯುವ ಪ್ರತಿಯೊಬ್ಬರಿಗೂ ಹೆಚ್ಚಾಗಿ ಎರಡು ಮೂರು ಅಕೌಂಟ್‍ಗಳು ಇರುತ್ತದೆ. ಅಂತೂ ಇತ್ತೀಚಿನ ದಿನಗಳಲ್ಲಿ ಫೇಕ್ ಅಕೌಂಟ್‍ಗಳು ಹೆಚ್ಚು ಸದ್ದು ಮಾಡುತ್ತಿದೆ. ಅಲ್ಲ ಇತ್ತೀಚೆಗಷ್ಟೇ ಅಲ್ಲ ಫೇಸ್‍ಬುಕ್ ಪ್ರಾರಂಭಿಸಿದ್ದಲ್ಲಿಂದಲೂ ಫೇಕ್ ಅಕೌಂಟ್‍ಗಳಿತ್ತು. ಆದರೆ ಹಿಂದೆ ಹೆಣ್ಣಿನ ಹೆಸರಿನಲ್ಲಿ ವ್ಯಕ್ತಿಪರ ಸಂದೇಶಗಳು ಪ್ರೀತಿಯ ನೆಪದಲ್ಲಿ ಮೋಸ ಮಾಡುತ್ತಿದ್ದಾರೆ ಇತ್ತೀಚೆಗೆ ಯಾರದೋ ಹೆಸರಿನಲ್ಲಿ ಬಂದು ಕೋಮುವಾದದ ಬೆಂಕಿಗೆ ಪೆಟ್ರೋಲ್ ಹಾಕುತ್ತಾರೆ. ಧರ್ಮ ಸಂಘಟನೆಯ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಾರೆ. ಅವರಿಗೊಂದು ನಂಬಿಕೆ ಇರುತ್ತದೆ, ಇದು ನಮ್ಮದೇ ಲೋಕ, ಇಲ್ಲಿ ನಾವೇ ರಾಜಕುಮಾರರು ಇಚ್ಚಿದ್ದನ್ನೆಲ್ಲಾ ಗೀಚಬಹುದು ನಾವು ಗೀಚಿದ್ದೇ ಇಲ್ಲಿಯ ನಿಯಮ ಹೇಳುವವರೂ ಇಲ್ಲ ಕೇಳುವವರೂ ಇಲ್ಲ ಯಾರಾದರೂ ಕೇಳಿದರೆ ಒಂದು ಬ್ಲೋಕ್ ಮೂಲಕ ಅವರ ತಂಟೆ ಮುಗಿಯುತ್ತದೆ. ಈ ವಿಶ್ವಾಸವು ಬರೀ ಭ್ರಮೆಯಾಗಿದೆ.
ನಾವು ಉಪಯೋಗಿಸುತ್ತಿರುವ ಮೊಬೈಲ್‍ನ ಐ.ಪಿ ಎಡ್ರಸ್ ಸೈಬರ್ ಸೆಲ್‍ನಿಂದ ನೋಡಿ ಅದರಲ್ಲಿರುವ ಸಿಮ್ ಯಾವುದು? ಯಾರ ಹೆಸರಿನಲ್ಲಿದೆ? ಯಾವ ಮೊಬೈಲ್ ಬಳಸುತ್ತಿದ್ದಾನೆ? ಇವನು ಈಗ ಎಲ್ಲಿದ್ದಾನೆ ಎಂದು ಸುಲಭವಾಗಿ ಪತ್ತೆ ಹಚ್ಚುವ ತಂತ್ರಜ್ಞಾನವಿದೆ. ಸರಕಾರದ ಆದೇಶದಂತೆ ಅತೀ ಹೆಚ್ಚು ಫೇಸ್‍ಬುಕ್ ಖಾತೆಗಳನ್ನು ತಡೆಯಲ್ಪಟ್ಟಿದ್ದು ಜ್ಯಾತ್ಯಾತೀತ ರಾಷ್ಟ್ರವಾದ ಭಾರತದಲ್ಲಾಗಿದೆ ಸರಕಾರದ ಆದೇಶದಂತೆ ಭಾರತದಲ್ಲಿ 5,000 ಖಾತೆಗಳು ತಡೆಯಲ್ಪಟ್ಟಿದೆ. ಅದರಲ್ಲಿ ಹೆಚ್ಚಾಗಿ ಕೋಮುವಾದ, ವ್ಯಕ್ತಿಯ ಕುರಿತು ಅಪಪ್ರಚಾರ ಮತ್ತು ಕಾಮ ಸಂದೇಶಗಳನ್ನು ಕಳುಹಿಸುವ ಖಾತೆಗಳಾಗಿದೆ. ಇಂತಹಾ ಸಂದೇಶಗಳು ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಗ್ರೂಪ್ ಮುಖಾಂತರವೂ ಹರಿದಾಡುತ್ತಿದೆ. ಇಂತಹಾ ಸಂದೇಶಗಳಿಗೆ ಮುಗಿ ಬೀಳದೇ ನಾವೆಲ್ಲಾ ಭಾರತೀಯರು, ನಮ್ಮೆಲ್ಲರಲ್ಲಿ ಹರಿದಾಡುತ್ತಿರುವ ರಕ್ತದ ಬಣ್ಣವೂ ಒಂದೇ, ಉಸಿರಾಡುವ ಗಾಳಿಯೂ ಒಂದೇ, ಕುಡಿಯುವ ನೀರೂ ಒಂದೇ, ಆಡುತ್ತಿರುವ ಭಾಷೆ ಬೇರೆಯಾದರೂ ಅದರಲ್ಲಿರುವ ವಿಷಯವು ಒಂದೇ ಹೀಗಿರುವ ನಾವುಗಳ ಮಧ್ಯೆ ಏಕೆ ವೇಶ ದೋಷ ರೋಶಗಳ ಕೋಶ? ಭಿನ್ನತೆಯನ್ನು ಆಶಿಸುವ ಮನಸ್ಸುಗಳು ಪ್ರೀತಿಯನ್ನು ಬೆಳೆಸಲಿ ಕೋಮು ಬರೆಯುತ್ತಿರುವ ಕೈಗಳು ಶಾಂತಿಯನ್ನು ಬರೆಯಲಿ. ಪ್ರಗತಿಯನ್ನು ಕಾಯಲಿ. ಸ್ನೇಹದ ಸಂದೇಶವನ್ನು ಸಾರಲಿ.
ಫೇಸ್‍ಬುಕ್‍ನಿಂದ ಕಾರ್ಯಕರ್ತರು ಸಮಯ ವ್ಯರ್ಥ ಮಾಡುತ್ತಿದ್ದಾರೆಂದು ಮನಗಂಡು ಹಲವು ಕಾರ್ಯಾಲಯಗಳಲ್ಲಿ ಫೇಸ್‍ಬುಕ್‍ನ್ನು ನಿಷೇಧಿಸಲಾಗಿತ್ತು. ಹೊಸತೊಂದು Profile ಚಿತ್ರ ಹಾಕಿ ಇನ್ನೊಬ್ಬರಿಗೆ ಟ್ಯಾಗ್ ಮಾಡಿ ಮತ್ತೊಬ್ಬರಲ್ಲಿ ಲೈಕ್ ಕೇಳಿ ಕಮೆಂಟ್‍ಗೆ ಪ್ರತಿ ಕಮೆಂಟ್ ಹಾಕುತ್ತಿರುವುದು ಸಮಯ ವ್ಯರ್ಥವಲ್ಲದೆ ಮತ್ತಿನ್ನೇನು? ಪೇಜ್ ಅಥವಾ ಗ್ರೂಪ್ ನಿರ್ಮಿಸಿ ಒಬ್ಬೊಬ್ಬರನ್ನೇ ಅವಹೇಳಿಸಿ ಕಾಮಿಡಿ ಸ್ಟೇಟಸ್ ಅಪ್‍ಡೇಟ್ ಮಾಡುವುದು ವ್ಯರ್ಥವಲ್ಲವೇ? ಆದರೆ ಬ್ಲೂವೇವ್ಸ್‍ನಂಥಹಾ ಹೊಸ ಪುಟಗಳು ತೆರೆದು ಪ್ರಗತಿಯ ಬೀಜವನ್ನು ಬಿತ್ತುತ್ತಿರಲು ಅದರ ಸಂದೇಶವನ್ನು ಆಲಿಸುತ್ತಿದ್ದರೆ ಹೇಗೆ ತಾನೇ ಸಮಯ ವ್ಯರ್ಥವಾದೀತು? ಇಂತಹಾ ಒಳ್ಳೆಯ ಸಂದೇಶಗಳನ್ನು ಕಳುಹಿಸಲು ಜನರನ್ನು ಒಳಿತಿನೆಡೆಗೆ ಕರೆಯಲು ಅವಕಾಶವಿರುವಾಗ ಸಾಮಾಜಿಕ ತಾಣ ಬಳಕೆದಾರರು ಇದಕ್ಕೆ ವಿರುದ್ದ ರೀತಿಯಲ್ಲಿ ಚಲಿಸುತ್ತಿದ್ದಾರೆನ್ನುವುದೇ ನಗ್ನ ಸತ್ಯ!
Photoshop ಮೂಲಕ ದಿನಕ್ಕೊಬ್ಬರ ಅಸಲಿ ಮೂಗನ್ನು ತೆಗೆದು ಕೃತಕ ಬಾಯಿಗಳನ್ನಿಟ್ಟು ಪರರ ಕೊರತೆಗಳನ್ನು ರೌಂಡಪ್ ಮಾಡಿ ತೋರಿಸುವವರು ಒಂದೆಡೆಯಾದರೆ ಕಪ್ಪು ಮುಖದವನು ಸೆಲ್ಫಿ ತೆಗೆದು ಪಿಕ್‍ಸಾರ್ಟ್ ಮೂಲಕ ಬಣ್ಣ ಬದಲಿಸಿದರೆ ವಾವ್! ವಾಟ್ ಎ ಬ್ಯೂಟಿ ನೈಸ್ ಮಚ್ಚಾ ಸೂಪರ್ ಡಾರ್ಲಿಂಗ್ ಎನ್ನುವ ಕಮೆಂಟ್ ಹಾಕುವವರು ಇನ್ನೊಂದೆಡೆ. ಆದರೆ ಕೆಲವು photo ಗಳನ್ನು ಎಡಿಟ್ ಮಾಡಿ ಹೊಸ ಶೋರ್ಟ್ ಫಾರ್ಮ್ ಹಾಕಿ ವಾಟ್ಸಪ್ ಮೂಲಕ ಫೇಮಸ್ ಆಗಲು ಇಚ್ಚಿಸುವವರೂ ಇದ್ದಾರೆ. ಇನ್ನು ಕೆಲವರು ಕಂಡದ್ದನ್ನು ಕೇಳಿದ್ದನ್ನು ಎಲ್ಲವನ್ನೂ ಕೇಳದೇ ನೋಡದೇ ಶೇರ್ ಮಾಡುವವರೂ ಇದ್ದಾರೆ ಆದುದರಿಂದಲೇ ವಾಟ್ಸಪ್ ಮೂಲಕ ಹೆಚ್ಚು ಗಾಳಿ ಸುದ್ದಿಗಳು ಹರಡುತ್ತಿದೆ. ನಾವು ಮಾಡುತ್ತಿರುವ ಪ್ರತಿಯೊಂದು ಟೆಚ್ ಕೂಡಾ ಅಮೂಲ್ಯವಾದುದು. ನಾವು ಶೇರ್ ಮಾಡುತ್ತಿರುವ ಪ್ರತಿಯೊಂದನ್ನೂ ಶೇರ್ ಮಾಡುವುದಕ್ಕಿಂತ ಮುಂಚೆ ಎರಡು ಮೂರು ಬಾರಿ ನೋಡಿರಬೇಕು? ಇದರ ಮೂಲ ಎಲ್ಲಿಂದ? ಇದರಿಂದ ಏನಾದರೂ ಉಪಯೋಗಗಳಿವೆಯಾ? ಇದು ಸತ್ಯ ಸಂಗತಿಯೇ? ಎಂದು ಸರಿಯಾಗಿ ತಿಳಿದ ನಂತರ ಅದನ್ನು ಶೇರ್ ಮಾಡಬೇಕು. ಇಲ್ಲದಿದ್ದರೆ ಅದರಿಂದ ಬಹಳ ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ. ಒಂದು ಮೆಸೇಜನ್ನು ಬರೆದು ಕೊನೆಗೆ ಇದನ್ನು 10 ಜನರಿಗೆ ಕಳುಹಿಸಿದರೆ ನಿಮ್ಮ ಸ್ಟೇಟಸ್ ಬದಲಾಗುತ್ತದೆ, ಅಥವಾ ಕಳುಹಿಸದಿದ್ದರೆ ನಿಮ್ಮ ವಾಟ್ಸಪ್ ಬ್ಲೋಕ್ ಆಗಲಿದೆ ಎನ್ನುವಂಥಹಾ ಗಾಳಿಸುದ್ದಿಗಳಿಗೆ ಕಿವಿ ಕೊಡಬಾರದು. ಅಪ್ಪಿ ತಪ್ಪಿ ನಾವು 10 ಜನರಿಗೆ ಕಳುಹಿಸಿದರೆ ಆ 10 ಜನರು ಹತ್ತು ಹತ್ತು ಜನರಿಗೆ ಕಳುಹಿಸಿದರೆ ಈ ಗಾಳಿಸುದ್ದಿಯೂ ಸರಪಳಿಯೋಪಾದಿಯಲ್ಲಿ ಸಂಚರಿಸುತ್ತಾ ಇರುತ್ತದೆ. ಹೀಗೆ ಸ್ಪಷ್ಟವಲ್ಲದ ಸಂದೇಶಗಳನ್ನು ಅಪಘಾತ ಚಿತ್ರಗಳನ್ನು ಅಶ್ಲೀಲ ಚಿತ್ರಣಗಳನ್ನು ಕಳುಹಿಸಿದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅಂಥಹಾ ಸಂದೇಶಗಳು ಬಂದು ಬಿಟ್ಟರೆ ಅದನ್ನು ತಕ್ಷಣವೇ ಡಿಲೀಟ್ ಮಾಡಿ ಬಿಡಬೇಕು .
ಸಾಮಾಜಿಕ ತಾಣ ಅದರಲ್ಲಿ ದಿನನಿತ್ಯ ಹಾಳಾಗುವ ಜನರು ಹೆಚ್ಚುತ್ತಲೇ ಇದೆ. ಮಾನವನ ನಿತ್ಯ ಜೀವನದಲ್ಲಿ ಅತ್ಯಾವಶ್ಯಕವಾದರೂ ಇದನ್ನು ದುರುಪಯೋಗ ಪಡಿಸುವಲ್ಲಿ ಹೆಚ್ಚು ಜನರು ಯಶಸ್ವಿಯಾಗಿರುತ್ತಾರೆ. ಎಲ್ಲಿ ನೋಡಿದರೂ ತಪ್ಪುಗಳೇ ರಾರಾಜಿಸುತ್ತಿದೆ. ಹೌದು ಹಿಂದೆ ತಪ್ಪು ಮಾಡಲು ನಾವು ಪಾಪಗಳತ್ತ ಹೋಗ ಬೇಕಾಗಿತ್ತು ಆದರೆ ಇಂದು ಪಾಪಗಳೇ ನಮ್ಮ ಬೆನ್ನು ಹತ್ತುತ್ತಿದೆ. “ವೆಕ್ ಅಫಿ” ಎಂಬ ಯ್ಯಾಂಟಿ ವೈರಸ್ ಕಂಪೆನಿ ನಡೇಸಿದ ಅಂಕಿ ಅಂಶದ ಪ್ರಕಾರ ಕೌಮಾರ್ಯ ಪ್ರಾಯದ ಮಕ್ಕಳಿಂದ ಮತ್ತು ಯುವಕರಿಂದ ಅತ್ಯಂತ ಹೆಚ್ಚಾಗಿ ಅಂತರ್ಜಾಲವು ದುರುಪಯೋಗವಾಗುತ್ತಿದೆ. ಇಂತಹಾ ತಾಣಗಳಿಂದ ದಿನೇ ದಿನೇ ಹಾಳಾಗುತ್ತಿರುವುದು ಬರೀ ಹುಡುಗರು ಮಾತ್ರವಲ್ಲ ಹೆಚ್ಚಾಗಿ ಹುಡುಗಿಯರೂ ದಾರಿ ತಪ್ಪುತ್ತಿದ್ದಾರೆ. Porn ಸೈಟ್‍ಗಳನ್ನು ವೀಕ್ಷಿಸುತ್ತಿರುವ ಭಾರತೀಯರಲ್ಲಿ ಶೇಖಡಾ 25 ಜನರು ಮಹಿಳೆಯರು ಎಂದು ಇತ್ತೀಚೆಗೆ “ಕ್ವಾರ್ಟ್” ಎನ್ನುವಂಥಹಾ ಓನ್‍ಲೈನ್ ಮ್ಯಾಗಝೀನ್ ನಡೆಸಿದ ಅಂಕಿ ಅಂಶದ ಪ್ರಕಾರ ತಿಳಿದುಬಂದಿದೆ ಇದು Porn hub ಎಂಬ ಪ್ರಮುಖ Porn site ನೀಡಿದ ವರದಿಯಾಗಿದೆ. ಈ ಸೈಟಿನಲ್ಲಿ ಮಿಲಿಯನ್ ಸಂದರ್ಶಕರಿದ್ದಾರೆ. ಈ ಸೈಟಿನಲ್ಲಿ ಮಿಲಿಯನ್ ಸಂದರ್ಶಕರಿದ್ದಾರೆ. ಅದರಲ್ಲಿ ಅತೀ ಹೆಚ್ಚು ಮೊಬೈಲ್ ಬಳಸುವವರಲ್ಲಿ ನಮ್ಮ ದೇಶವು ಎರಡನೇ ಸ್ಥಾನದಲ್ಲಿದೆ. 49.9 ಶೇ ಜನರು ಮೊಬೈಲ್ ಮೂಲಕ ಬಳಸುತಿದ್ದರೆ, 47.5 ಶೇ ಜನರು ಡೆಸ್ಕ್ ಟಾಪ್ ಮೂಲಕ ಮತ್ತು ಶೇ 2.6 ಟ್ಯಾಬ್ ಮೂಲಕ ಉಪಯೋಗಿಸುತ್ತಾರೆ.
ನಾಚಿಕೆಗೇಡಿನ ವಿಷಯವೇನೆಂದರೆ ಹದಿಹರೆಯದ ಮಕ್ಕಳೂ ಕೂಡ ಇಂತಹ ತಂತ್ರಗಳಿಗೆ ಮುಗಿಬೀಳುತಿದ್ದಾರೆ. ಕೌಮಾರ್ಯದಲ್ಲಿ ದೈಹಿಕ ಹಾಗೂ ಭಾವನಾತ್ಮಕ ವಿಕಸನಗಳು ನಡೆಯುತಿದ್ದು ದೇಹದಲ್ಲಿ ಉತ್ಪಾದನೆಯಾಗುವ ಹಾರ್ಮೋನುಗಳು ಲೈಂಗಿಕ ಭಾವನೆಗಳನ್ನು ಕೆರಳಿಸುತ್ತವೆ. ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಪರಸ್ಪರ ಲೈಂಗಿಕಾಸಕ್ತಿ ಮೂಡುವ ಪ್ರಾಯವದು. ಲೈಂಗಿಕ ವಿಕ್ರತಿ ಮತ್ತು ರತಿ ಕ್ರೀಡೆಗಳನ್ನು ತೋರಿಸುವ ಪೋರ್ನ್ ಸೈಟ್ ಗಳು ಇಂದಿನ ಮಕ್ಕಳ, ಯುವಕರ, ಅಂತರ್ಜಾಲ ಬಳಕೆದಾರರ ದಾರಿಗೆಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇದು ಮಾನವನನ್ನು ದಾರಿ ತಪ್ಪಿಸಬಲ್ಲ ಅವನ ಜೀವನವನ್ನು ಪರಾಜಿತಗೊಳಿಸಬಲ್ಲ ಅತಿದೊಡ್ಡ ವಿಪತ್ತಾಗಿದೆ. ಮಾತ್ರವಲ್ಲ ಇತ್ತೀಚಿಗೆ ಸಮಾಜಿಕ ತಾಣದಲ್ಲಿ ಹೆಚ್ಚಾಗಿ ವಾಟ್ಸಪ್ ನಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಕಲ್ಪಿಸದೆ ಹಿಡನ್ ಕ್ಯಾಮೆರಾಗಳಿಂದ ತೆಗೆದ ಪ್ರಸವ ವಿಡಿಯೋ ಮುಂತಾದ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳು ಹರಿದಾಡುತಿತ್ತು ಅನ್ನುವುದೇ ತಲೆ ತಗ್ಗಿಸ ಬೇಕಾದ ವಿಷಯ. ಕೆಲವೊಮ್ಮೆ ತಿಳಿಯದೆ ಯಾವುದೋ ಕ್ಲಿಪ್ಪನ್ನು ಕ್ಲಿಕ್ಕಿಸಿ ಅದರ ಬಲೆಗೆ ಬಿದ್ದು, ಕೊನೆಗೆ ಅಂತಹ ತಾಣಗಳ ಸಕ್ರೀಯ ಬಳಕೆದಾರನಾಗುತ್ತಾನೆ. ಹೆಚ್ಚಾಗಿ ಮೊಬೈಲ್ ಬಳಕೆದಾರರು ಮಾಡಿದ ತಪ್ಪಗಳನ್ನು ಪುನಾರಾವರ್ತಿಸುತ್ತಿದ್ದಾರೆ ಎಂದು ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯ ತಜ್ನರು ನಡೆಸಿದ ಅದ್ಯಾಯದಿಂದ ವರದಿಯಾಗಿದೆ. ಇಂದಿನ ಅತ್ಯಾಚಾರ ಕ್ರತ್ಯಗಳಿಗೆ ಇಂತಹಾ ತಾಣಗಳು ಕಾರಣವಾಗುವುದನ್ನೂ ಮನಗೊಂಡ ಕೇರಳ ಸರಕಾರ ೬೫೨ ಅಶ್ಲೀಲ ವೆಬ್ ಸೈಟ್ ಗಳನ್ನು ನಿಶೇದಿಸುವಂತೆ ಕೇಂದ್ರದ “CERTIN” ( Computer Emergency Response Team India) ಗೆ ಮನವಿ ಸಲ್ಲಿಸಿದೆ. ಭಾರತದ ಅಶ್ಲೀಲ ತಾಣಗಳಿಗೆ ವಿರೋಧ ಹೇರುವುದಾಗಿ ಕೇಂದ್ರ ಸರಕಾರ ಅದರ ಪ್ರಥಮ ಘಟ್ಟದಂತೆ ಭಾರತದ ಇಂಟರ್ನೆಟ್ ಆಂಡ್ ಮೊಬೈಲ್ ಅಸೋಶಿಯೇಶನ್ ಆಫ್ ಇಂಡಿಯಾದಿಂದ ಅಶ್ಲೀಲ ತಾಣಗಳ ಪಟ್ಟಿ ಆವಶ್ಯ ಪಟ್ಟಿದ್ದಾರೆ. ವಿದೇಶ ರಾಷ್ಟ್ರಗಳಲ್ಲಿ ಪೋರ್ನ್ ಸೈಟ್ ಗಳು ವಿಧೇಯವಾದರೂ ಇವು ಭಾರತೀಯ ಸಂಸ್ಕ್ರತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮಾತ್ರವಲ್ಲ ಸಾಮಾಜಿಕ ತಾಣಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಅಶ್ಲೀಲ ದ್ರಶ್ಯಗಳನ್ನು ಹರಿದಾಡುವುದೂ ಅಪರಾಧವೆಂದು ಪರಿಗಣಿಸಿ, ದ್ರಶ್ಯಗಳನ್ನು ರವಾನಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಲು ತಿದ್ದುಪಡಿ ಕಾಯಿದೆಯಡಿ ಅವಕಾಶ ಕಲ್ಪಿಸಲಾಗುತ್ತದೆ. ಅಶ್ಲೀಲ ಚಿತ್ರಗಳ ರವಾನೆಗೆ ತಡೆ ಹಾಕಲು ರಾಜ್ಯ ಸರಕಾರವು ಮನವಿ ಮಾಡಿದ್ದು, ಈ ಕುರಿತು ಕೇಂದ್ರ ಸರಕಾರವು ಚಿಂತನೆ ನಡೆಸಿದೆ. ಇಂತಹಾ ಕೆಟ್ಟ ಸಂದೇಶಗಳನ್ನು ಶೇರ್ ಮಾಡದೆ, ಕೆಟ್ಟ ತಾಣಗಳಿಗೆ ಮುಗಿಬೀಳದೆ ಇನ್ನೆಂದೂ ಇಂತಹ ತಾಣಗಳಿಗೆ ಹೋಗಲಾರೆನು, ಇಂತಹಾ ಸಂದೇಶಗಳನ್ನು ಕಳುಹಿಸಲಾರೆನು, ಅಶ್ಲೀಲ ಸಂದೇಶಗಳನ್ನು ಕಳುಹಿಸುವವರನ್ನು ಬ್ಲಾಕ್ ಮಾಡುವೆನು ಎಂದೊ ಪ್ರತಿಜ್ನೆ ಮಾಡ ಬೇಕು. ಅಶ್ಲೀಲ ಚಿತ್ರಗಳನ್ನು ಕಳುಹಿಸ ಬಾರದೆಂದು, ಅದನ್ನು ನೋಡ ಬಾರದೆಂದೂ ಸ್ನೇಹಿತರಿಗೆ ಸದುಪದೇಶ ನೀಡ ಬೇಕು. ನಮ್ಮ ಮಕ್ಕಳಿಗೆ ಅದನ್ನು ನೋಡಲು ಅವಕಾಶ ಕೊಡಬಾರದು. ಚಿಕ್ಕ ಮಕ್ಕಳಿಗೆ ಸ್ವಂತವಾದ ಮೊಬೈಲನ್ನು ಕೊಡ ಬಾರದು. ಕೊಡುವುದಾದರೂ ಇನ್ಟರ್ನೆಟ್ ಸೌಲಭ್ಯವಿರುವ ಮೊಬೈಲ್ ನೀಡ ಬಾರದು. ಇಂದು ಶಾಲಾ ಚಟುವಟಿಕೆಗಳಿಗೆ ಕಂಪ್ಯೂಟರ್ ಅತ್ಯಾವಶ್ಯಕವಾಗಿರುವುದರಿಂದ ಅದರಲ್ಲಿ ಇಂಟರ್ನೆಟ್ ಬಳಕಗೆ ಅವಕಾಶವಿದ್ದರೆ ಮಾತ ಪಿತರು ಅದರ ಕುರಿತು ಸಂಪೂರ್ಣವಾಗಿ ತಿಳಿದಿರಬೇಕು.
ಪ್ರತಿಯೊಂದು ಮನೆಯವರೂ ತಮ್ಮಲ್ಲಿ ಬೆಳೆಯುತ್ತಿರುವ ನವ ಪೀಳಿಗೆಯನ್ನು ಉತ್ತಮ ದಾರಿಯಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಬೇಕು. ಇಂದಿನ ಯುವಕರಾದ ನಾವು ನಾಳೆಯ ಯುವಕರಿಗೆ ಅಂದರೆ ಇಂದಿನ ಮಕ್ಕಳಿಗೆ ಮಾದರಿಯಾಗಬೇಕು. ಶಾಂತಿ, ಸ್ನೇಹ, ಸಹೋದರತೆ ಕೌಟುಂಬಿಕ ಸಂಬಂಧಗಳು ಮಾಯವಾಗುತ್ತಿರುವ ಇಂದಿನ ಕಾಲದಲ್ಲಿ ಅವುಗಳನ್ನು ಬೆಳೆಸಲು ಪ್ರಯತ್ನಿಸಬೇಕು. “ A Society never destroyed by the inactivities of Rascals, but it destroyed by the inactivities of Good people” "ಕೆಟ್ಟ ಕೆಲಸಗಳಿಂದ ಸಮಾಜ ಕೆಡುವುದಿಲ್ಲ ಆದರೆ ಸಜ್ಜನರು ಕೆಲಸ ಮಾಡದಿರುವುದರಿಂದ ಸಮಾಜ ಕೆಡುತ್ತದೆ" ಎಂಬ ಚಿಂತಕನೊಬ್ಬನ ಮಾತು ಚಿಂತನಾರ್ಹ. ಕೆಟ್ಟವರಿಗೆ ಒಳ್ಳೆಯ ದಾರಿಯನ್ನು ನಾವು ತೋರಿಸಬೇಕು. ಪ್ರತಿಯೊಬ್ಬನ ಮುಂದೆ ಎರಡು ದಾರಿಗಳಿರುತ್ತವೆ. ಕೆಟ್ಟದಾರಿಯು ಒಳ್ಳೆಯ ದಾರಿಗಿಂತ ಎಷ್ಟೇ ಸುಲಭವಾಗಿದ್ದರೂ, ಸಂತಸವನ್ನು ನೀಡುತಿದ್ದರೂ ನಾವು ಸತ್ಪಥದ ದಾರಿಯಲ್ಲೇ ಹೋಗಬೇಕು.
ಸಮಾಜಿಕ ತಾಣಗಳಲ್ಲಿ, ಗ್ರೂಪ್ ಗಳಲ್ಲಿ ಬರೇ ಹಾಯ್, ಹೆಲೋ ಎನ್ನುವಂತಹ ಸಂದೇಶಗಳನ್ನು ಕಳುಹಿಸುವುದನ್ನು ಬಿಟ್ಟು ಸಮಾಜಿಕ ತಾಣಗಳನ್ನು ಸಮಾಜಕ್ಕೆ ಉಪಯೋಗವಾಗುವಂತಹ ಮಾಹಿತಿಯನ್ನು ಕಳುಹಿಸ ಬೇಕು. ಅದಕ್ಕೂ ಸಾಧ್ಯವಾಗುತಿಲ್ಲದಿದ್ದರೆ ನಾಡಿನ ಪ್ರಗತಿಯನ್ನು, ಸಮಾಜಿಕ ಕ್ರಾಂತಿಯನ್ನು ಬಯಸುವ ಬ್ಲೂ ವೇವ್ಸ್ ನಂತಹ ಪುಟಗಳಿಗೆ ಬೆಂಬಲ ನೀಡಬೇಕು. ಆಧುನಿಕ ತಂತ್ರಜ್ನಾನಗಳನ್ನು ಅತಿಯಾಗಿ ಬಳಸದೆ, ಮಿತವಾಗಿ ಬಳಸಬೇಕು. ಅತಿಯಾಗಿ ಬಳಸುವುದರಿಂದ ಜ್ನಾಪಕ ಶಕ್ತಿಯ ಮೇಲೆ ಪರಿಣಾಮ ಬೀಳುತ್ತದೆ ಎಂದು ಮಲೇಶ್ಯಾದ ಸಂಶೊಧಕರು ತಿಳಿಸಿದ್ದಾರೆ. ಕೆಟ್ಟ ಸಂದೇಶಗಳನ್ನು ಆಲಿಸದೆ, ಪರರ ಕೊರತೆಗಳನ್ನು ಎತ್ತಿ ಹೇಳದೇ, ಸಮಯ ವ್ಯರ್ಥವಾಗದಂತೆ ಸತ್ಯದೆಡೆಗೆ ಜನರನ್ನು ಆಹ್ವಾನಿಸುತ್ತಾ ಬಳಸ ಬೇಕಾದ ರೀತಿ ನೀತಿಗಳನ್ನು ತಿಳಿದು ಸಮಾಜಿಕ ತಾಣಗಳನ್ನು ಉಪಯೋಗಿಸ ಬೇಕು
ಇದು ನನ್ನ ಮೊದಲ ಲೇಖನವಾದರೆ ಇಂತಹ ಹಲವು ಲೇಖನಗಳು ಮೊದಲಾಗಿ ನಂತರದ್ದಾಗಿ ಕೊನೆಗೊಮ್ಮೆ ಯಶಸ್ವಿ ಲೇಖಕನಾದರೆ ಬರೆಯಲು ಅರಿಯದವರಿಗೆ ಲೇಖನಿ ಕೊಟ್ಟು ಅವಕಾಶ ಕಲ್ಪಿಸಿದ ಬ್ಲೂ ವೇವ್ಸ್ ಗೆ ನನ್ನ ಮನದಾಳದ ಧನ್ಯವಾದಗಳು. ಈ ವರುಷದ ಅಂತ್ಯ ನವ ವರುಷದ ಪ್ರಾರಂಭ ನವ ಚಂತನೆಗಳನ್ನು ತರುತ್ತಾ ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸ್ರಷ್ಟಿಸುತ್ತಾ ಸಮಾಜಿಕ ತಾಣಗಳಿಗೆ ಮಾದರಿಯಾಗಲಿರುವ ಬ್ಲೂ ವೇವ್ಸ್ ಪ್ರತಿ ವರುಷವೂ ಹರುಷವನ್ನು ತರುತ್ತಾ ಚಿರಕಾಲ ಬಾಳಲಿ. ನೀಲಿ ಅಲೆಗಳ ಹಿಂದಿರುವ ಬಿಳಿಯ ಮುಖಗಳಿಗೆ ದೇವನು ಕರುಣಿಸಲಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ