ಧರ್ಮದ ಮರ್ಮ ಅರಿಯದ ಅಧಮಿಗಳು ಮಾಡಿದ ಕುತಂತ್ರಕ್ಕೆ ಧರ್ಮ ಹೊಣೆಯಲ್ಲ. ಧರ್ಮ ಆತ್ಮ ಬೆಳಗುವ ಬೆಳಕೇ ಹೊರತು,ಇತರರನ್ನು ಉರಿಸಿ ಬೂದಿ ಮಾಡಿಸಬಲ್ಲ ಜ್ವಾಲೆಯಲ್ಲ. ಧರ್ಮದಿಂದ ಶಾಂತಿ ನೆಲೆ ನಿಲ್ಲಬೇಕೆ ಹೊರತು ಅಶಾಂತಿಯ ಕಿಡಿ ಹೊತ್ತಿ ಉರಿಯಬಾರದು. ಹಿಂಸೆ ಯಾವುದಕ್ಕೂ ಪರಿಹಾರವಲ್ಲ .ಉದ್ರೇಕಿತ ಮನಸ್ಸುಗಳು ನೆಮ್ಮದಿ ಹಾಳು ಮಾಡಬಲ್ಲವೇ ಹೊರತು ಶಾಂತಿ ನೀಡಲಾರದು . ಸರ್ವಧರ್ಮೀಯರು ಇದನ್ನು ಅರ್ಥ ಮಾಡಿ ಕೊಂಡರೆ ಮಾತ್ರ ಸರ್ವರಿಗೂ ಒಳಿತು.
ಶಾಂತಿ ಮತ್ತು ಅಹಿಂಸೆಯ ತತ್ವಗಳ ಮೂಲಕ ಯುದ್ಧವನ್ನು ಗೆಲ್ಲಲು ಸಾಧ್ಯವೇ?ಎಂದು ಯಾರಾದರೂ ಕೇಳಿದರೆ . ಗಾಂಧೀಜಿಯವರು ಇದಕ್ಕೆ ಉತ್ತಮ ಉತ್ತರವನ್ನು ಕೊಟ್ಟಿದ್ದಾರೆ.."ಶಾಶ್ವತವಾದ ಶಾಂತಿಯ ಸಾಧ್ಯತೆಯನ್ನು ನಂಬದೇ ಇರುವುದು ಮಾನವೀಯತೆಯ ಒಳಗೆ ದೈವತ್ವ ಅಡಗಿದೆ ಎಂಬುದನ್ನು ನಂಬದೇ ಇರುವಂತೆಯೇ ಆಗಿದೆ. ಅಂದರೆ ಮಾನವರಲ್ಲಿ ಅಂಥ ಸದ್ಗುಣ ಸಂಪತ್ತು ಇದೆ ಮತ್ತು ಅದರೊಂದಿಗೆ ಅವರು ಬಾಳಿ ಬದುಕಬೇಕು."ಈ ನಂಬಿಕೆಯು ಗ್ರಹಿಸಿ ಪಡೆಯುವಂತಹದ್ದಲ್ಲ. ಬೆಳೆದು ಗಳಿಸಬೇಕಾದದ್ದು ಮತ್ತು ಇಂಥ ಬೆಳೆಯುವಿಕೆ ಆಂತರ್ಯದಿಂದ ಬಂದರೆ ಮಾತ್ರ ಶಾಂತಿ ನೆಲೆಸುತ್ತದೆ.
ಶಾಂತಿಯ ಸದಾಶಯದೊಂದಿಗೆ
ಟೀಂ ಬ್ಲೂ ವೇವ್ಸ್
ಟೀಂ ಬ್ಲೂ ವೇವ್ಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ