ಸೋಮವಾರ, ನವೆಂಬರ್ 10, 2014

ನ್ಯಾಯ ಸಿಗಲಿ, ದ್ವೇಷ ಅಳಿಯಲಿ, ಶಾಂತಿ ಉಳಿಯಲಿ



ಸಮಾಜ ವಿರೋದಿ ನರ ರಾಕ್ಷಸರು ಮಾಡಿದ ಪಾಶವೀ ಕ್ರತ್ಯಗಳನ್ನು ಬೊಟ್ಟು ಮಾಡಿ ತಮ್ಮ ಬೇಳೆ ಬೇಯಿಸಲು ಶ್ರಮಿಸುತ್ತಿರುವ ಕೋಮು ಕ್ರಿಮಿಗಳಿಗೆ ಸರಿಯಾದ ಮದ್ದು ಅರೆಯೋದು ಕಾಲದ ಬೇಡಿಕೆಯಾಗಿದೆ . ಯಾವ ಧರ್ಮಕ್ಕೂ ಸೇರಿಸಲು ಲಾಯಕ್ಕಲ್ಲದವರನ್ನು ಅವರ ಜಾತಿ ಸೂಚಕ ಹೆಸರಿನ ಮಾತ್ರಕ್ಕೆ ಇಡೀ ಸಮುದಾಯವನ್ನೇ ಅಪರಾಧಿಗಳ ಕಟಕಟೆಯಲ್ಲಿ ನಿಲ್ಲಿಸುವ , ಹೀನಾಯವಾಗಿ ಟೀಕಿಸುವ ಸಂಕುಚಿತ ಮನೋಭಾವ ದೇಶದ ಒಗ್ಗಟಿಗೆ ಮಾರಕ ಎಂಬುದನ್ನು ಮನಗಾಣ ಬೇಕಾಗಿದೆ .

ನಮ್ಮ ಮಂಗಳೂರಿನ ರತ್ನ ಕೊಠಾರಿ,ಸೌಜನ್ಯ,ಉತ್ತರಪ್ರದೇಶದ ಬದೌನ್ನ ಸಹೋದರಿಯರು, ಹೈದರಬಾದಿನ ನಾಶೀಯಾ, ಡೆಲ್ಲಿಯ ನಿರ್ಭಯಾಳ ಮೇಲೆ ಕಿರಾತಕರು ಎರಗಿ ಕೊಂದಾಗ ದೇಶದ ಪ್ರಜ್ಞಾವಂತರು ಬೀದಿಗಿಳಿದು ಪ್ರತಿಭಟಿಸಿದ್ದರು. ತಮ್ಮ ಹೆಣ್ಣು ಮಗಳಿಗೆ ಆದ ಅನ್ಯಾಯ ಯಾವ ಹೆಣ್ಣಿಗೂ ಆಗಬಾರದೆಂದು ಜಾತಿ ಮತ ಭೇದ ಮರೆತು ಮರುಗಿದ್ದರು. ನಂದಿತಾಳ ಸಾವಿನ ತನಿಖೆ ಕೂಡ ನಡೆಯಬೇಕೆಂದು ಶಾಂತಿಯನ್ನು ಬಯಸುವ ಮನಸುಗಳು ಸರಕಾರವನ್ನು ಒತ್ತಾಯ ಮಾಡುತ್ತಿವೆ.

ತಮ್ಮ ನೀಚ ನಾಲಿಗೆಯ ಗುಣ ಮಟ್ಟವನ್ನು ಪರೀಕ್ಷಿಸುವ ಸ್ಪರ್ದೆಗೆ ಇಳಿದಿರುವ ರಾಜಕೀಯ ನಾಯಕರು ಜಿದ್ದಾಜಿದ್ದು ಬಿಟ್ಟು ,ಮಾನವೀಯ ಕಳಕಳಿಯಿಂದ ಸಮರ್ಪಕ ತನಿಖೆ ನಡೆಯಲು ಅನುವು ಮಾಡಿ ಕೊಟ್ಟರೆ ಮಾತ್ರ ಅಮಾಯಕವಾಗಿ ಬಲಿಯಾದವರ ಆತ್ಮಕ್ಕೆ ಶಾಂತಿ ಸಿಗಲು ಸಾದ್ಯ . ಪ್ರತಿಯೊಂದು ಅಸಹಜ ಸಾವುಗಳನ್ನು ತಮ್ಮ ಓಟಿನ ಮೂಲಕ ಅಲೆಯುವ ಕೆಟ್ಟ ಪ್ರವತ್ತಿ ಯನ್ನು ರಾಜಕೀಯ ಪಕ್ಷಗಳು ಬಿಟ್ಟರೆ ಮಾತ್ರ ಜನತೆಗೆ ನಿಜವಾದ ನೆಮ್ಮದಿ ಸಿಗಬಹುದೇ ಹೊರತು ಪರಸ್ಪರ ಕೆಸರೆರಚಾಟದಿಂದ ಅಲ್ಲ ಎಂಬುದನ್ನು ಎಲ್ಲರೂ ಮನಗಾಣ ಬೇಕು.

ನ್ಯಾಯ ಸಿಗಲಿ, ದ್ವೇಷ ಅಳಿಯಲಿ , ಶಾಂತಿ ಉಳಿಯಲಿ ಎಂಬುದೇ ಬ್ಲೂ ವೇವ್ಸ್ ನ ಬೇಡಿಕೆ ..

www.facebook.com/BlueWavesPage

#Get #United #For #Better #Tomorrow

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ