ಅಲ್ ಫುರ್ಖಾನ್ ಪಬ್ಲಿಕ್ ಸ್ಕೂಲಿನ ಮಕ್ಕಳು ವಿಶಿಷ್ಟ ರೀತಿಯಲ್ಲಿ ವಿಶ್ವ ಅಹಾರ ದಿನವನ್ನು ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. "ಒಂದು ಬೊಗಸೆ ಅಕ್ಕಿ" ಎಂಬ ಯೋಜನೆ ಸ್ಕೂಲ್ ಕ್ಯಾಂಪಸ್ಸಿನಲ್ಲಿ ಮಾತ್ರವಲ್ಲ ಕೇರಳದಾದ್ಯಂತ ಚರ್ಚಾ ವಿಷಯವಾಗಿದೆಯಲ್ಲದೇ ಇತರ ಸ್ಕೂಲ್ ಕ್ಯಾಂಪಸ್ಗಳು ಅಲ್ ಫುರ್ಖಾನಿನ ಹಾದಿಯಲ್ಲಿ ಹೆಜ್ಜೆಯಿಡುವಂತೆ ಮಾಡಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ವಂಡೂರ್ ಸಮೀಪದ ಅಲ್ ಫುರ್ಖಾನ್ ವಿದ್ಯಾ ಸಂಸ್ಥೆ ಸ್ಕ್ಕೂಲಿನ ಬಕೆಟ್ ಚಾಲೆಂಜ್ ಭಾಗವಾಗಿ ಪ್ರತೀ ಮಕ್ಕಳಿಂದ ಒಂದು ಬೊಗಸೆ ಅಕ್ಕಿಯನ್ನು ಸಂಗ್ರಹಿಸಿ ಸುತ್ತಮುತ್ತಲಿನ ಬಡವರಿಗೆ ಹಂಚುವ ಯೋಜನೆ ಹಮ್ಮಿಕೊಂಡಿತ್ತು. ಪ್ರತೀ ಮಗುವು ಮನೆಯಿಂದ ಒಂದು ಬೊಗಸೆ ಅಕ್ಕಿಯನ್ನು ತಂದು ಸಂಸ್ಥೆಯ ನಿರೀಕ್ಷೆಯನ್ನೂ ಮೀರಿ ಈ ಯೋಜನೆಯ ಗೆಲುವಿಗಾಗಿ ಕೈ ಜೋಡಿಸಿದರು. ಸಂಗ್ರವಾದ ಒಟ್ಟು ೬೦೦ ಕೆಜಿಯಷ್ಟು ಅಕ್ಕಿಯನ್ನು ಸುತ್ತಮುತ್ತಲಿನ ೧೫೦ ಕುಟುಂಬಗಳಿಗೆ ಹಂಚಲಾಯಿತು.
ಆಹಾರ ಮತ್ತು ಕೃಷಿ ಯುಎನ್ ಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ ಜಗತ್ತಿನ ಒಟ್ಟು ಸಂಖ್ಯೆಯಲ್ಲಿ ಸುಮಾರು 842 ಮಿಲಿಯನ್ ಅಂದರೆ ಎಂಟು ಜನರಲ್ಲಿ ಒಬ್ಬರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ತುತ್ತು ಅನ್ನಕ್ಕೆ ಪರದಾಡುವ ಕುಟುಂಬಗಳಿಗೆ ಇಂತಹ ಸಣ್ಣ ಸಣ್ಣ ಪ್ರಯತ್ನಗಳು ಆಶಾವಾದವನ್ನು ತುಂಬುತ್ತದೆ. ಇಂತಹ ಪ್ರಯತ್ನಗಳು ವ್ಯಾಪಕವಾಗಿ ಹರಡಿದರೆ ದೇಶದ ಆಹಾರ ಭದ್ರತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು. ಇಂತಹ ಪ್ರಯತ್ನಗಳಿಗೆ ಕೈ ಜೋಡಿಸುವ ಮೂಲಕ ಆಹಾರ ಭದ್ರತೆಗೆ ನಮ್ಮ ಅಳಿಲು ಸೇವೆ ನೀಡೋಣ.
ಟೀಮ್ ಬ್ಲೂ ವೇವ್ಸ್
www.facebook.com/BlueWavesPage

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ