ಪ್ರಪಂಚದ ಅತೀ ದೊಡ್ಡ ಜಾತ್ಯತೀತವಾದ ಪ್ರಜಾಪ್ರಭುತ್ವ ದೇಶವಾದಂತಹ ಭಾರತದಲ್ಲಿ ಅತ್ಯಾಚಾರ,ಕೋಮುವಾದ, ಭೀತಿವಾದ ಗಳು ಮೇಲೈಸಿ ಅಶಾಂತಿಗಳು ಉಂಟಾಗುತ್ತಿದೆ.
ಪರಸ್ಪರ ಸಹೋದರರಂತೆ ಅನ್ಯೋನ್ಯತೆಯಿಂದ ಜೀವಿಸಬೇಕಾದವರು ಧರ್ಮ ,ಧರ್ಮಗಳ ಹೆಸರೇಳಿಕೊಂಡು ಪರಸ್ಪರ ಬಡಿದಾಡಿಕೊಳ್ಳುವಂತಹ ಸನ್ನಿವೇಶಗಳಾಗಿವೆ ನಾವು ನೋಡುತ್ತಿರುವುದು.
ಒಂದು ಕಡೆ ಧರ್ಮ ಧರ್ಮಗಳ ನಡುವೆ ಅಪನಂಬಿಕೆಗಳು ಬೆಳೆದು ದೇಶದ ಸೌಹಾರ್ದತೆಗೆ ಮಾರಕವಾಗುತ್ತಿರುವಾಗ ಮತ್ತೊಂದು ಕಡೆಯಿಂದ ದೇಶದ ಉದ್ದಗಲಕ್ಕೂ ಸ್ತ್ರೀ ವರ್ಗವು ನಿರಂತರವಾಗಿ ಲೈಂಗಿಕ ದೌರ್ಜನ್ಯಗಳಿಗೆ ಒಳಪಡುತ್ತಲೇ ಇದ್ದಾರೆ..!!
ದೇಶದಲ್ಲಿ ನಡೆಯುತ್ತಿರುವಂತಹ ಎಲ್ಲಾ ಅನಾಚಾರ,ಅತ್ಯಾಚಾರ,ಅಕ್ರಮಗಳ ರೂವಾರಿಗಳನ್ನು ಧರ್ಮದ ಹೆಸರಿನಲ್ಲಿ ಗುರುತಿಸಿ ಅದಕ್ಕೆ ಮತೀಯ ಬಣ್ಣವನ್ನು ಲೇಪಿಸಿ ಗಲಭೆಗಳನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯುವಂತಹ ರಾಜಕೀಯ ಪಕ್ಷಗಳಿಗೇನು ಕೊರತೆಯಿಲ್ಲ.
ಸೌಹಾರ್ದಯುತ ಭಾರತವನ್ನು ಕಟ್ಟಲು ಯುವ ಸಮೂಹಕ್ಕೆ ಖಂಡಿತ ಸಾಧ್ಯವಿದೆ.ಪರಸ್ಪರ ಸಂಘಟನೆಗಳನ್ನು ಕಟ್ಟಿಕೊಂಡು ಅನ್ಯ ಧರ್ಮಗಳನ್ನು ನಿಂದಿಸಿ ದೇಶದ ಸೌಹಾರ್ದತೆಗೆ ಧಕ್ಕೆ ತರದೆ ಪರಸ್ಪರ ಸಹೋದರತೆಯಿಂದ, ಏಕತೆಯಿಂದ ಒಂದು ಗೂಡಿ ಬಾಳೋಣ.
ಧರ್ಮ ಧರ್ಮಗಳ ನಡುವಿನ ಅಪನಂಬಿಕೆಗಳನ್ನು ದೂರವಾಗಿಸಿ, ದ್ವೇಷವ ಬಿಟ್ಟು ಸೌಹಾರ್ದಯುತ ದೇಶವ ಕಟ್ಟುವವರು ನಾವುಗಳಾಗೋಣ..
ಸದಾಶಯದೊಂದಿಗೆ
ಟೀಂ ಬ್ಲೂ ವೇವ್ಸ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ