ಭಾನುವಾರ, ನವೆಂಬರ್ 9, 2014

ತಬಸ್ಸುಮ್- ನಿನಗಿದೋ ಸೆಲ್ಯೂಟ್


ಗೆಳೆಯರೇ....

ಫೆಸ್ಬುಕ್ನಲ್ಲಿ ಮಂಗಳೂರಿನ ತಬಸ್ಸುಮ್ ಎಂಬ ದಿಟ್ಟ ಹೆಣ್ಣು ಮಗಳಿಂದ ನಡೆಸಲ್ಪಡುತ್ತಿರುವ HIV ಪೀಡಿತ ಮಕ್ಕಳ ಪಾಲನಾ ಕೇಂದ್ರದ ಬಗ್ಗೆ ಬಂದ ಲೇಖನ ನಿಮ್ಮಲ್ಲಿ ಬಹುತೇಕ ಮಂದಿ ನೋಡಿರುತ್ತೀರ.
ಆ ಮಕ್ಕಳನ್ನು ಬೇಟಿಯಾಗಿ, ಕೆಲ ಹೊತ್ತು ಅವರೊಂದಿಗೆ ಕಳೆದು, ಅವರಿಗೆ ಸಾಂತ್ವಾನ ನೀಡಿ, ಆ ಧೀರ ಮಹಿಳೆಗೆ ಧೈರ್ಯ ತುಂಬಿ ಬರಬೇಕೆಂಬ ಆಲೋಚನೆಯೊಂದಿದೆ ನನ್ನ ಪತ್ನಿಯೊಂದಿಗೆ ಈ ವಿಷಯ ಚರ್ಚಿಸಿದ್ದೆ.ಆಕೆಯೂ ಸಿದ್ಧಳಾಗಿದ್ದಳು ನನ್ನೊಂದಿಗೆ ಕೈ ಜೋಡಿಸಲು.ಹಾಗೆ ಮರುದಿನವೇ "Sneha Deep" ಗೆ ಬಸ್ಸನ್ನೇರಿದೆವು.

ಮಂಗಳೂರಿನಲ್ಲಿ ಬಸ್ಸಿಳಿದು, ರಿಕ್ಷಾ ಮಾಡಿಕೊಂಡು ಉರಿ ಬಿಸಿಲಿನಲ್ಲಿ SNEHA DEEP ಹೊಕ್ಕಾಗ, ತಬ್ಬಲಿ ಕಂದಮ್ಮಗಳು ತಮ್ಮನ್ನು ಸಂತೈಸಲು ನಮ್ಮವರೇ ಯಾರೋ ಬಂದಿದ್ದಾರೆ ಎಂದು ಆಸೆ ಭರಿತ ಕಂಗಳು ನಮ್ಮನ್ನು ಸ್ವಾಗತಿಸಿದವು. xyz ಎಂಬ ಕಂದಮ್ಮನನ್ನು ಮುದ್ದಿಸುವಾಗ ಕಂಗಳು ತೇವಗೊಂಡವು. ಆ ಮನೆಯ ಒಳ ಭಾಗದಲ್ಲಿ ಹವಾನಿಯಂತ್ರಿತ ಕೋಣೆಯನ್ನೂ ಮೀರಿಸುವಂತಹ ತಂಪಾದ ವಾತಾವರಣ ಅನುಭವಿಸಿ ಪುಳಕಿತಗೊಂಡೆವು. ತಬಸ್ಸುಮ್ ಎಂಬ ಧೀರ ಮಹಿಳೆಯೊಂದಿಗೆ ಮಾತನಾಡಲು ತೊಡಗಿ, ಅವರ ಮಾತುಗಳನ್ನೇ ಶಾಂತವಾಗಿ ಆಲಿಸ ತೊಡಗಿದೆವು.

"ನಾನು 14 ವರ್ಷಗಳಿಂದ NGO ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಗೆಳೆಯರಲ್ಲಿ ಓರ್ವ HIV ಪೀಡಿತನ ಪರಿಸ್ತಿತಿ ಕಂಡು ಇಂತಹ ಕೆಲಸಕ್ಕೆ ಕೈ ಹಾಕಿದೆ. ಈ HIV Protection care ಕಳೆದ 3 ವರುಷಗಳಿಂದ ನಡೆಸುತ್ತಿದ್ದೇನೆ. ಇದಕ್ಕಾಗಿ ಯಾರೂ ನನಗೆ ಬಾಡಿಗೆ ಮನೆ ಕೊಡುತ್ತಿರಲಿಲ್ಲ. ಈಗಿರುವ ಮನೆಗೆ ತಿಂಗಳಿಗೆ 10,000 ಬಾಡಿಗೆ. HIV ಸೋಂಕಿತ ಮಕ್ಕಳೆಂದು ಮನೆ ಮಾಲಿಕನಿಗೂ ತಿಳಿದಿಲ್ಲಾ. ಗೊತ್ತಾದರೆ ಮನೆ ಖಾಲಿ ಮಾಡಿಸಬಹುದು.ಈ ಪರಿಸರದ ಯಾರಿಗೂ ಇದು HIV Protection care ಎಂದು ತಿಳಿದಿಲ್ಲ. ಈ ಸಂಗತಿಯನ್ನು ಗೌಪ್ಯವಾಗಿಟಿದ್ದೇನೆ . ಏಕೆಂದರೆ ಮನೆ ಬಾಡಿಗೆಯ ಭಯ. 14 ಮಕ್ಕಳೂ ಶಾಲೆಗೇ ಹೊಗುತ್ತಿದ್ದಾರೆ. ಈ ವಿಷಯ ಅವರ ಸಹಪಾಟಿಳಿಗೆ ತಿಳಿದರೆ, ಮಕ್ಕಳನ್ನು ನಿಂದಿಸ ಬಹುದು. ಆದ್ರೆ ಶಾಲೆಯ ಆಡಳಿತ ವರ್ಗಕ್ಕೆ ತಿಳಿದಿದೆ. ಪರಿಸರದವರು ಕನಿಕರದ ದ್ರಿಷ್ಟಿ ಬೀರಿದರೆ ಮಕ್ಕಳು ಮಾನಸಿಕವಾಗಿ ಕುಗ್ಗಬಹುದು ಎಂಬ ಕಾರಣಕ್ಕಾಗಿ ಬಹಳ ಜಾಗ್ರತೆಯಿಂದ ನಡೆಸಿಕೊಂಡು ಬರುತ್ತಿದ್ದೇನೆ. ಕೆಲವರ ಕೊಂಕು ನುಡಿ ಗಳು "ನೀವೊಬ್ಬ ಮುಸ್ಲಿಂ ಆಗಿ ಕೇವಲ HIV ಪೀಡಿತ ಹಿಂದೂ ಮಕ್ಕಳನ್ನು ಮಾತ್ರ ಯಾಕೆ ಆರೈಕೆ ಮಾಡಿ ಕೊಂಡಿರುವುದು? ನಿಮ್ಮ ಸಮುದಾಯದಲ್ಲಿ ಇಂತಹ ಮಕ್ಕಳಿಲ್ಲವೆ" ಎಂದು ಸಂಕುಚಿತ ಮನಸ್ಸಿನ ಜನರ ಮಾತಿನ ಬಾಣಗಳು ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸುತ್ತವೆ. ಇಂತಹ ಸಂಕುಚಿತ ಮನಸ್ಸಿನವರಿಗೆ ನನ್ನ ಉತ್ತರ- ನಮ್ಮ ಕೇಂದ್ರದಲ್ಲಿ ಜಾತಿ, ಧರ್ಮಗಳ ಭೇದವಿಲ್ಲ. ಮಕ್ಕಳು ಸೃಷ್ಟಿಕರ್ತನ ಹೂದೋಟದ ಹೂಗಳು. ಅವಕ್ಕೆ ಜಾತಿಯ ಲೇಪ ಹಚ್ಚ ಬೇಡಿ. ಈ ಮಕ್ಕಳನ್ನು ಶಾಲಾ ರಜಾ ದಿನಗಳಲ್ಲಿ ಅವರ ಬಡ ಹೆತ್ತವರು ಕರ್ಕೊಂಡು ಹೊಗ್ತಾರೆ. ರಜೆ ಮುಗಿದ ನಂತರ ಬಂದು ಬಿಟ್ಟು ಹೊಗ್ತಾರೆ. ಆರೈಕೆಗಾಗಿ ಒಬ್ರನ್ನು ನೇಮಿಸಿದ್ದೆ. ಆದ್ರೆ ಕಾನೂನಿನ ಪ್ರಕಾರ ಎರಡು ಜನ ಅಗತ್ಯವಾಗಿರುವುದರಿಂದ, ವಿಧಿ ಇಲ್ಲದೆ ಇನ್ನೊಬ್ರನ್ನು ಸೇರಿಸಿಕೊಳ್ಳ ಬೇಕಾಯಿತು.

ಕಳೆದ 3 ವರ್ಷಗಳಿಂದ SNEHA DEEP ಎಂಬ Protection Care ಆರ್ಥಿಕ ಅಡಚಣೆಯೊಂದಿಗೆ ನಡೆಸುತ್ತಿದ್ದೇನೆ. ಕೆಲವು ಮಾಧ್ಯಮದವರು ಸಂದರ್ಶನಕ್ಕೆ ಕರೆ ಮಾಡುತ್ತಿದ್ದಾರೆ. ಆದರೆ ಈ ವಿಷಯ ಬಹಿರಂಗವಾದರೆ ಈಗ ಇರುವ ಮನೆ ಖಾಲಿ ಮಾಡಬೇಕಾಗ ಬಹುದು ಎಂಬ ಭಯದಿಂದ ನಿರಾಕರಿಸುತ್ತಿದ್ದೇನೆ.ತಿಂಗಳಿಗೆ 50 ರಿಂದ 60 ಸಾವಿರ ಖರ್ಚಾಗುತ್ತದೆ." ಎಂದು ಗದ್ಗದಿತವಾಗಿ ಹೇಳುವಾಗ, ಅವರ ಕಂಗಳು ತೇವವಾಗಿದ್ದವು.
ಅವರ ತೇವವಾದ ಕಣ್ಣುಗಳನ್ನು ದಿಟ್ಟಿಸಲಾಗದೆ ನೆಲಕ್ಕೆ ದ್ರಷ್ಟಿನೆಟ್ಟು ಭಾರವಾದ ಮನಸ್ಸಿನೊಂದಿಗೆ ಆಲಿಸುತ್ತಿದ್ದೆ.

ನನ್ನ ಶಕ್ತಿಯನುಸಾರ 20 ಸಾವಿರ ರೂಪಾಯಿಗಳನ್ನು ನನ್ನ ಪತ್ನಿಯ ಮುಖಾoತರ ಅವರ ಕೈಗಿಟ್ಟು "ನನ್ನಿoದ ಸಾದ್ಯವಾದ ಕಿರು ಕಾಣಿಕೆ" ಎನ್ನುವಾಗ "ನಮಗಿದು ದೊಡ್ಡ ವಿಷಯ. ಸಾವಿರ, ಎರಡು ಸಾವಿರ ಕೂಡ ನಮಗೆ ದೊಡ್ಡ ವಿಷಯ" ಎಂದರು.

ಉಳಿದ ಮಕ್ಕಳು ಶಾಲೆಗೆ ಹೋಗಿರುವ ಕಾರಣ ಇನ್ನೊಮ್ಮೆ ಬರುವೆ ಎಂದು ಹೊರಡಲನುವಾದಾಗ ಅಲ್ಲಿನ ಆರೈಕೆಗಾರಳಲ್ಲಿ ಓರ್ವ ಮಹಿಳೆ "ಧನ್ಯವಾದ" ಹೇಳುವಾಗ, ಅವರ ಮಾತಿಗಿಂತ ಅವರ ಕಣ್ಣುಗಳು ನನ್ನ ಕಣ್ಣನ್ನು ತಗ್ಗಿಸುವಂತೆ ಮಾಡಿದವು. ನಾವು ಭಾರವಾದ ಹೆಜ್ಜೆಯೊಂದಿಂಗೆ ಅಲ್ಲಿಂದ ನಿರ್ಗಮಿಸಿದೆವು.

ಗೆಳೆಯರೇ....

ತಬಸ್ಸುಮ್ ಅವರ ಮಾತು ಕೇಳುವಾಗ ಎಂತಹ ಕಲ್ಲು ಹೃದಯಗಳೂ ಕರಗಿ ಹೋದೀತು.ತಮ್ಮದಲ್ಲದ ತಪ್ಪಿಗೆ ಸಮಾಜದಿಂದ ತಿರಸ್ಕ್ರತಗೊಮಡ 14 ಪುಟ್ಟ ಕಮದಮ್ಮಗಳಿಗೆ ಬಾಳು ಆಸರೆ ಕೊಡಲು ಒಬ್ಬಳು ಮುಸ್ಲಿಂ ಸಮುದಾಯದ ಹೆಣ್ಣುಮಗು ತೋರಿರುವ ದಿಟ್ಟತನ ಹೃದಯ ವೈಶಾಲ್ಯತೆಗೆ,ಕೈ ಜೋಡಿಸದಿದ್ದರೆ ನೆರವು ನೀಡದಿದ್ದರೆ ನಮಗೆ ನಮ್ಮೊಳಗಿರುವ ಮಾನವೀಯತೆಗೆ ಅಪಮಾನ. ಬೇಕು ಬೇಡದ್ದಕ್ಕೆಲ್ಲವೂ ವ್ಯಯಿಸುವ ನಾವು ತಬಸ್ಸುಮ್ ಳ ಮಹತ್ತರ ಧ್ಯೇಯಕ್ಕೆ ಒಂದು ದಿನದ ನೆರವು ನೀಡಲಾರೆವಾ? ದಯವಿಟ್ಟು ಬಾಯಿಮಾತಿನ ಕನಿಕರ ತೋರಿಸಿ ಕಣ್ಣುಮುಚ್ಚಿ ಕೂರದಿರಿ.ಅವರಿಗೆ ಬೇಕಾಗಿರುವುದು ಆರ್ಥಿಕ ಸಹಾಯದೊಂದಿಗಿನ ಸಾಂತ್ವಾನ.ಒಮ್ಮೆ ಸ್ನೇಹದೀಪ್ ಗೆ ಬೆಟಿ ಕೊಡಿ. ಆ 14 ಕಂದಮ್ಮಗಳು ಅರಳುವ ಮುನ್ನ ಬಾಡಿ ಹೋಗದಂತೆ ನೀರುಣಿಸುವ...!!! ಕೆಲವರ ವಿರೋಧದ ನಡುವೆಯೂ, ಈ ಸಮಾಜದೆದುರು ವಿಶಾಲ ವ್ರಕ್ಷದಂತೆ ಆ ಕಂದಮ್ಮಗಳಿಗೆ ನೆರಳಾಗಿರುವ ಆ ಧೀರ ಮಹಿಳೆಗೆ ಬೆನ್ನೆಲುಬಾಗಿ ನಿಲ್ಲೋಣ...!

(ಸೂಚನೆ: ನನ್ನ ಯಾವುದೇ ಲೇಖನದಲ್ಲಿ ಕೊಟ್ಟಂತಹ ಮೊತ್ತವನ್ನು ನಮೂದಿಸುತ್ತೆನೆ. ಅದಕ್ಕೆ ಅದರದೇ ಆದ ನಿಸ್ವಾರ್ಥ ಉದ್ದೇಶವಿದೆ. ಅದನ್ನು ಬಹಿರಂಗ ಪಡಿಸಲು ಇಚ್ಚಿಸುವುದಿಲ್ಲ.ನಾನೂ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ ಹೊರತು ಕೋಟ್ಯಾಧೀಶನಲ್ಲ.ಅಸಹಾಯಕರ ನೋವುಗಳಿಗೆ ಕಿವಿಯಾಗಬೇಕೆಂಬ ಅದಮ್ಯ ಉತ್ಸಾಹವನ್ನು ತಪ್ಪಾಗಿ ಅರ್ಥೈಸದಿರಿ.ವಿಶಾಲ ಮನೋಭಾವದೊಂದಿಗೆ ನೋಡ ಬೇಕಾಗಿ ವಿನಂತಿ)


ವಿಳಾಸ:
'Sneha Deep'
(Residential Program for Children)
Door No: 2/7/411
First Kottara Cross
Bejei, Kapokad Road
Manglore - 575004

Mobile: +91 9964024655

Bank details :-

Title: Sneha Deep, Kottara, Manglore.

Bank: Corporation bank, Poonja Arcade building, KS Rao road. Hampankatta, Manglore.

SB A/C # 012900101024473

IFSC code:
Corp0000129

ಇಂತಿ
ಅನಾಮಿಕ

#team #BlueWaves

www.facebook.com/BlueWavesPage

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ