ಹದಿಹರೆಯದ ಪ್ರೀತಿ ಪ್ರೇಮ : ನೈಜತೆ, ಕಾಲ್ಪನಿಕತೆ ಮತ್ತು ತಪ್ಪಿಗೆ ತೆರುವ ಬೆಲೆಗಳು.
"ಅಮ್ಮಾ ನಂಗಿನ್ನು ಜೀವಿಸಬೇಕಾಗಿಲ್ಲ, ನಾನು ಸಾಯ್ತೀನಿ. ಯಾರಾದ್ರೂ ಕೇಳಿದರೆ ಏನಾದ್ರೂ ಸೀರಿಯಸ್ ರೋಗ ಬಂದು ಸತ್ತು ಹೋದಳು ಅಂದುಬಿಡಿ. ಪ್ಲೀಸ್ ನನ್ನನ್ನು ಕ್ಷಮಿಸಿ ಅಮ್ಮಾ... ಅವನಿಲ್ಲದ ಜೀವನ ಬೇಡ ಎಂದೇ ನಾನಿವತ್ತು ಕಪಾಟಿನಲ್ಲಿದ್ದ ಎಲ್ಲಾ ಮಾತ್ರೆಗಳನ್ನು ಕುಡಿದು ಸಾಯಲು ಹೊರಟಿದ್ದೇನೆ. ನನ್ನನ್ನು ಕ್ಷಮಿಸಿಬಿಡು".
ಒಂದು ಆಂಬುಲೆನ್ಸ್ ಬಹಳಷ್ಟು ವೇಗವಾಗಿ ಚಲಿಸುತ್ತಿದೆ, ತುರ್ತು ಚಿಕಿತ್ಸೆಗೆ ಬೇಕಾಗಿ ನಗರದ ಪ್ರಮುಖ ಆಸ್ಪತ್ರೆ ಕಡೆ. 17 ವಯಸ್ಸಿನ ಸಹನಾ ಆಂಬುಲೆನ್ಸ್ ಒಳಗೆ ನೋವಿನಿಂದ ತನ್ನ ಹತ್ತಿರ ಕುಳಿತಿದ್ದ ತಾಯಿಯ ಬಳಿ ಹೇಳುತ್ತಿದ್ದಾಳೆ. ಮರುತ್ತರ ನೀಡಲು ಆ ತಾಯಿ ಕೂಡ ಅಶಕ್ತರಾದರು. ಆಸ್ಪತ್ರೆ ತಲುಪಿತು, ಬಹಳಷ್ಟು ಚಿಕಿತ್ಸೆಯ ಮೂಲಕ ಖರ್ಚು ವೆಚ್ಚ ಮಾಡಿ 10 ದಿನಗಳ ಬಳಿಕ ಸಹನಾ ಮೊದಲಿನಂತಾದಳು.
ಮಗಳ ಬಗ್ಗೆ ಅಪಾರ ನಂಬಿಕೆ ಮಮತೆ ಹೊಂದಿರುವ ಆ ತಂದೆಗೆ ಬಹಳಷ್ಟು ನೋವಾಗಿತ್ತು. ಮಗಳನ್ನು ಹತ್ತಿರ ಕರೆದು "ಸಹನಾ. ಹೇಳು, ನಿನ್ನ ಸಮಸ್ಯೆ ಏನು.. ? ನಿನ್ನ ತಾಯಿ ಹೇಳದಿದ್ದರೂ ಡಾಕ್ಟರ್ ನಂಗೆ ಎಲ್ಲಾ ವಿಷಯ ತಿಳಿಸಿದರು. ಯಾಕಾಗಿ ನೀ ಸುಸೈಡ್ ಮಾಡಲು ಪ್ರಯತ್ನಿಸಿದೆ?. ಅಷ್ಟಕ್ಕೂ ನಿಂಗೇನೂ ಕಡಿಮೆ ಮಾಡಿದ್ದೇನೆ ನಾನು. ನನ್ನ ಜೇಬು ಖಾಲಿಯಾಗಿದ್ದರೂ ಸಾಲ ಮಾಡಿ ತಂದು ನೀ ಹಣ ಕೇಳಿದಾಗಲೆಲ್ಲಾ ನಾನು ಕೊಟ್ಟಿಲ್ಲವೇ.. ಅವಶ್ಯಕತೆಗಳನ್ನು ಚಾಚೂ ತಪ್ಪದೆ ನೆರವೆರಿಸಿಲ್ಲವೇ..?. ಏನಿದ್ದರೂ ಬೇಗ ಹೇಳು. ಕೈಯಲ್ಲಿ ಹಣ ಸಂಪತ್ತಿಲ್ಲದಿದ್ದರೂ ಸಮಾಜದಲ್ಲಿ ಒಂದು ನೆಲೆ ಬೆಲೆ ಇದೆ. ಅದೂ ಇಲ್ಲದಾಗಿಸಿ ಊರವರಿಗೆ ಮುಖ ತೋರಿಸದಂತೆ ಮಾಡಬೇಡ.. " ಎಂದು ಹೇಳಿ ಮುಗಿಸುವಾಗ ಆ ತಂದೆಯ ಕಣ್ಣು ತುಂಬಿತ್ತು. ಇದನ್ನು ಕೇಳಿದ ಸಹನಾಗೆ ಉತ್ತರಿಸಲು ಬಾಯಿ ಬರದಂತಾಯಿತು. ಕಣ್ಣು ಮುಚ್ಚಿ "ಅಪ್ಪಾ ನನ್ನನ್ನು ಕ್ಷಮಿಸಿಬಿಡು.. ನಾನು ತಪ್ಪು ಮಾಡಿದೆ. ನಾನು ಒಬ್ಬನನ್ನು ಪ್ರೀತಿಸಿದೆ, ನನ್ನ ಜೀವಕ್ಕಿಂತಲೂ ಹೆಚ್ಚಾಗಿ. ಅವನು ನನ್ನನ್ನು ಮದುವೆಯಾಗುತ್ತೇನೆ ಎಂದಾಗ ನಾನು ನಿಮಗೆಲ್ಲಾ ಅವನನ್ನು ಇಷ್ಟವಾಗಬಹುದು ಎಂದು ಯೋಚಿಸಿ ಸಮಯ ಬಂದಾಗ ಹೇಳಬೇಕೆಂದಿದ್ದೆ. ಆದರೆ ಇವಾಗ ಅವನ ತಂದೆ ತಾಯಿಯ ನೆಪ ಹೇಳಿ ಅವನು ನನ್ನನ್ನು ಮದುವೆ ಆಗಲು ಸಾಧ್ಯವಿಲ್ಲ ಅನ್ನುತ್ತಿದ್ದಾನೆ. ಅವನಿಲ್ಲದೆ ಜೀವಿಸಲಾರದಷ್ಟು ಅವನನ್ನು ಹಚ್ಚಿಕೊಂಡಿದ್ದೇನೆ. ಸ್ಸಾರೀ ಅಪ್ಪಾ ಇನ್ನು ನಿನಗರಿವಿಲ್ಲದಂತೆ ಏನೂ ಮಾಡಲಾರೆ, ಈ ಬಾರಿ ನನ್ನನ್ನು ಕ್ಷಮಿಸಿಬಿಡು ಅಪ್ಪಾ" ಎಂದು ಬಿಕ್ಕಿ ಬಿಕ್ಕಿ ಅತ್ತಳು.
ಹೌದು ಇದೊಂದು ಸಣ್ಣ ಉದಾಹರಣೆ ಮಾತ್ರ. ಪ್ರತಿದಿನ ಈ ಪ್ರೀತಿ-ಪ್ರೇಮ ಅಂತೇಳಿ ಅದೆಷ್ಟೋ ಹದಿ ಹರೆಯದ ಯುವಕ-ಯುವತಿಯರು ತಮ್ಮ ಬಾಳ ಬೆಳಕನ್ನು ತಾವಾಗಿಯೇ ನಂದಿಸುತ್ತಿದ್ದಾರೆ. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳಿಗೆ ಕಡಿವಾಣ ಹಾಕಲಾರದೆ ಕ್ಷಣಿಕ ಸುಖದ ಬೆನ್ನು ಬಿದ್ದು ಜೀವನ ಏನೆಂದು ಅರ್ಥವಾಗುವ ಮೊದಲೇ ಜೀವನಕ್ಕೆ ಕೊನೆ ಕಾಣಿಸುತ್ತಿದ್ದಾರೆ. ನಿಮಗೆಲ್ಲಾ ತಿಳಿದಿರುವ ಹಾಗೆ ಈಗಿನ ಪರಿಸ್ಥಿತಿಯೇ ಬದಲಾಗಿದೆ. ಸರಿಯಾಗಿ ಓದಿ ಸ್ಕೂಲ್ ಕಾಲೇಜುಗಳಲ್ಲಿ ರಾಂಕ್ ಪಡೆಯಬೇಕಾಗಿದ್ದ ಹದಿ ಹರೆಯದ ಯುವಕ ಯುವತಿಯರು ಇಂದು ಮೊಬೈಲ್-ನ, ಸಾಮಾಜಿಕ ಜಾಲತಾಣಗಳ ದಾಸರಾಗಿ ಪ್ರೀತಿ ಎಂಬ ಕೂಪಕ್ಕೆ ಬಿದ್ದು ಮೇಲೇಳಾರದೆ ಕೈ ಕಾಲು ಬಡಿಯುತ್ತಾ ತಮ್ಮ ಜೀವನವನ್ನು ತಾವೇ ನಾಶಮಾಡುತ್ತಿದ್ದಾರೆ.
ತಾನು ಕನಸು ಕಂಡದ್ದೆಲ್ಲಾ ನಿಜ ಎಂದು ನಂಬಿ ತಂದೆ-ತಾಯಿ ಕುಟುಂಬವನ್ನು ಮರೆತು ಇಂದೋ ನಿನ್ನೆಯೋ ಬಂದ ಹುಡುಗನ ಜೊತೆ ತನ್ನ ಸರ್ವಸ್ವವನ್ನೂ ಅರ್ಪಿಸುವ ಹುಡುಗಿಯರು ಚಿಂತಿಸಬೇಕಾಗಿದೆ. ಕಲಿಯಬೇಕಾದ ವಯಸ್ಸಿನಲ್ಲಿ ಆಟ ಪಾಠವನ್ನು ಬಿಟ್ಟು ಅನಗತ್ಯ ಏನನ್ನೂ ಯೋಚಿಸಬಾರದು. ಗೆಳೆಯ ಗೆಳತಿಯರನ್ನು ಆಯ್ಕೆ ಮಾಡುವಾಗಲೂ ಜಾಗರೂಕತೆಯಿಂದಿರಬೇಕು. ಕೆಲವರು ತಮ್ಮ ಗೆಳೆತನದ ಕಾರಣದಿಂದ ದಾರಿ ತಪ್ಪುತ್ತಿದ್ದಾರೆ. ನಮ್ಮನ್ನು ಇಷ್ಟು ವರ್ಷ ತಮ್ಮ ಕಷ್ಟ ನಷ್ಟಗಳನ್ನು ಬದಿಗಿಟ್ಟು ಸಾಕಿ ಸಲಹಿದ ನಮ್ಮ ಹೆತ್ತವರಿಗೆ ಎಂದೂ ಮೋಸ ಮಾಡಬಾರದು. ಎಲ್ಲಾ ವಿಷಯಗಳಲ್ಲೂ ನಮ್ಮಿಷ್ಟದಂತೆ ನಾವು ಕೇಳಿದ್ದನ್ನೆಲ್ಲಾ ತೆಗೆದುಕೊಟ್ಟಿರುವ ನಮ್ಮ ಹೆತ್ತವರು ನಮ್ಮ ಮದುವೆ ಬಗ್ಗೆಯೂ ಒಂದು ಕನಸು ಇಟ್ಟಿರುತ್ತಾರೆ ಅಲ್ವಾ?. ಅವರು ಹೇಗಾದರೂ ಉತ್ತಮವಾದುದನ್ನೇ ಕೊಡುತ್ತಿರುವಾಗ ಅವರ ಭಾವನೆಗಳಿಗೆ ಬೆಂಕಿ ಇಟ್ಟು ಸ್ವಯಂ ಆಯ್ಕೆ ಮಾಡಲು ಪ್ರಯತ್ತಿಸುವುದು ಎಷ್ಟು ಸರಿ?.
ಇಲ್ಲಿ ಹೆತ್ತವರ ಪಾತ್ರ ಬಹಳಷ್ಟಿದೆ. ಈ ಒಂದು ವಯಸ್ಸಿನಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿ, ಒಂದು ಲಿಮಿಟ್ ನಲ್ಲೇ ಅವರನ್ನು ಸಲಹಬೇಕು. ತಪ್ಪು ಸರಿಗಳ ಬಗ್ಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಮನದಟ್ಟು ಮಾಡಬೇಕು. ತಪ್ಪು ಕಂಡಾಗ ತಿದ್ದಬೇಕಾದ ರೀತಿಯಲ್ಲಿ ಅವರನ್ನು ತಿದ್ದಿ ನೇರಮಾರ್ಗಕ್ಕೆ ಕರೆತರುವುದು ಪ್ರತಿ ತಂದೆ-ತಾಯಿಯರ ಆದ್ಯ ಕರ್ತವ್ಯವಾಗಿದೆ. ಅದು ಬಿಟ್ಟು ಅಗತ್ಯಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಮುದ್ದಾಡಿ ಕೇಳಿದನ್ನೆಲ್ಲಾ ತೆಗೆದು ಕೊಟ್ಟು ಅವರ ಆಗು ಹೋಗುಗಳ ಬಗ್ಗೆ ದಿನ ನಿತ್ಯ ಕಣ್ಣಾಡಿಸದಿದ್ದರೆ ಮುಂದೊಂದು ದಿನ ದೊಡ್ಡ ಬೆಲೆ ತೆರಬೇಕಾದೀತು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಮಾತಿನಂತೆ ಹದಿಹರೆಯದ ವಯಸ್ಸಿನಲ್ಲೇ ಮಕ್ಕಳಿಗೆ ಸರಿಯಾದ ಬುದ್ದಿವಾದ ಹೇಳಿ ಸರಿದಾರಿಗೆ ತಂದು ನಿಲ್ಲಿಸಿ ಅವರ ಜವಾಬ್ದಾರಿಯನ್ನು ಅರ್ಥಮಾಡಿಸಿ ಕೊಡುವುದು ಹೆತ್ತವರ ಕರ್ತವ್ಯವಾಗಿದೆ. ಜೀವನ ಏನಂಬುದೆಂದು ಕಲಿಯುವ ಮೊದಲೇ ತಾನು ಕಂಡದ್ದೇ ಸರಿ ಎಂದು ಜೀವನದ ಬಲು ಪ್ರಾಮುಖ್ಯ ವಿಷಯಗಳ ಬಗ್ಗೆ ಸ್ವ-ತೀರ್ಮಾನ ತೆಗೆದುಕೊಳ್ಳುವ ಪ್ರತಿಯೊಬ್ಬ ಹದಿಹರೆಯದ ಯುವಕರೂ ಚಿಂತಿಸಬೇಕಾಗಿದೆ.
-ಟೀಮ್ ಬ್ಲೂ ವೇವ್ಸ್
www.facebook.com/BlueWavesPage

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ