ಗೆಳೆಯರೇ, ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಚರ್ಚಾ ವಿಷಯವಾಗಿದೆ "ಅಂತರ್ಧರ್ಮೀಯ ಪ್ರೇಮ ಪ್ರಕರಣಗಳು"
ನಮ್ಮ ಸಮಾಜದಲ್ಲಿ ಅಂತರ್ಜಾತೀಯ ಪ್ರೇಮ ಪ್ರಕರಣಗಳು ಸಾಮರಸ್ಯದ, ಸಹೋದರತ್ವ ಬಾಳಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಅದಕ್ಕೆ ಪೂರಕವೆಂಬಂತೆ ಸಮಾಜದ ಸ್ವಾಸ್ಥ್ಯ ಬಯಸದ ಅಘೋಷಿತ ನಾಯಕರು ಅದಕ್ಕಿಷ್ಟು ಎಣ್ಣೆ ಸುರಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಅವಕಾಶಕ್ಕಾಗಿ ಹೊಂಚು ಹಾಕುತಿದ್ದಾರೆ. ಇಡೀ ಊರು ಉಧ್ವಿಗ್ನ ಗೊಳ್ಳುತ್ತೆ, ಅಮಾಯಕರನ್ನ ವಿಚಾರಣೆಯಾ ನೆಪದಲ್ಲಿ ಹೊತ್ತೊಯ್ಯುತ್ತಾರೆ, ಪ್ರತಿಭಟನೆಗಳು ನಡೆಯುತ್ತವೆ, ಎರಡೂ ಕಡೆಯ ಮನೆ ಮಂದಿ ಆತಂಕದ ಕ್ಷಣ ಗಣನೆಯಲ್ಲಿರುತ್ತಾರೆ. ಮಾಧ್ಯಮಗಳು FIR ಆಗುವ ಮೊದಲೇ ಅಂತಿಮ ತೀರ್ಪು ಕೊಟ್ಟು ಬಿಡ್ತಾವೆ. ಮನಸ್ಸಿಗೆ ತೋಚಿದ್ದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡ್ತಾವೆ. ಮುಂದಿನ ಕ್ಷಣದಲ್ಲಿ ಊರಿಗೆ ಊರೆ ರಣರಂಗವಾಗ ಬಲ್ಲಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ.
ಸಣ್ಣ ಮಕ್ಕಳಿಂದ, ಮುದುಕರವರೆಗೂ ಇಲ್ಲಿನ ಕೋಮು ಸೂಕ್ಷ್ಮದ ಅರಿವಿದೆ. ಯಾರೋ ಅಪಾಪೋಲಿಗಳು, ಗುಂಡಾಡಿಗಳು ತಮ್ಮ ಮೋಜಿಗಾಗಿ, ಅನ್ಯ ಧರ್ಮದವರನ್ನು (ಹಿಂದೂ, ಮುಸ್ಲಿಂ, ಕ್ರೈಸ್ತ) ಪ್ರೀತಿಸಿ, ಜೊತೆಗೆ ಓಡಿ ಹೋಗಿ, ತಮ್ಮ ಮನೆ ಹಾಗು ಊರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ.
ಅದು ಬಿಟ್ಟು ಇವತ್ತು (ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ಧರ್ಮಗಳಲ್ಲಿ) ಮದುವೆಯ ವಯಸ್ಸಿಗೆ ಬಂದಂತಹ ಹಾಗೂ ಮದುವೆಯ ವಯಸ್ಸು ಮೀರಿದಂತಹ ಅದೆಷ್ಟೋ ಯುವತಿಯರು ಎಲ್ಲಾ ಧರ್ಮಗಳಲ್ಲಿ ಕಾಣ ಬಹುದು. ಅಂತಹ ಯುವತಿಯರನ್ನು ವರದಕ್ಷಿಣೆ ಎಂಬ ಪೆಡಂಬೂತವನ್ನು ಹೊಡೆದೋಡಿಸಿ ಸರಳ ರೀತಿಯಲ್ಲಿ ವಿವಾಹವಾಗಿ, ಇನ್ನೊಬ್ಬರಿಗೆ ಮಾದರಿಯಾಗುವಂತಹ ಅವಕಾಶವನ್ನು ಕೈ ಚೆಲ್ಲುತ್ತಾರೆ.
ಆ ಯುವತಿಯರ ಆರ್ಥಿಕ ಸ್ಥಿತಿ, ಮನಸ್ಸಿನ ವೇದನೆ ಅರ್ಥ ಮಾಡಿಕೊಂಡು ಒಂದು ಸುಂದರ ಬಾಳು ಕೊಟ್ಟರೆ, ಅದಕ್ಕಿಂತ ಮಿಗಿಲಾದ ಮಹತ್ಕಾರ್ಯ ಬೇರೊಂದಿದೆಯೇ ? ನಮ್ಮನ್ನು ಹೊತ್ತು, ಹೆತ್ತು, ಸಾಕಿ ಸಲುಹಿದ ಮನೆ ಮಂದಿಯ ಮನ ನೋಯಿಸಿ, ಅವರನ್ನು ಸಂಕಷ್ಟದ ವಾತಾವರಣದಲ್ಲಿ ಬಿಟ್ಟು ಓಡುವುದು ಯಾವ ಸೀಮೆಯ ಗಂಡಸುತನ?
ಈ ಎಲ್ಲಾ ವಿಷಯಗಳನ್ನು ಮನದಲ್ಲಿಟ್ಟುಕೊಂಡು, ಸಮಾಜದ ಸ್ವಾಸ್ಥ್ಯ ಕೆಡದಂತೆ, ಸರ್ವಧರ್ಮಿಯರೊಂದಿಗೆ ಸಹೋದರರಂತೆ ಬಾಳಿ ಬದುಕುವುದು ಶ್ರೆಷ್ಟವಲ್ಲವೇ? ಇಂತಹಾ ಅವಕಾಶಕ್ಕಾಗಿ ಕಾದಿರುವ ಯುವತಿಯರ ಹೃದಯ ರಾಜನಾಗಿ, ಸುಂದರ ಸಮಾಜ ನಿರ್ಮಿಸಿರಿ ಎಂಬ ಕಿವಿ ಮಾತಿನೊಂದಿಗೆ....
ಇಂತಿ ನಿಮ್ಮ
ಅನಾಮಿಕ
#Being #Human #Respect #Women
www.facebook.com/BlueWavesPage

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ